ಆ ಸ್ಥಾನಕ್ಕೆ ಹಾರ್ದಿಕ್​ ಲಾಯಕ್ಕಿಲ್ಲ! ಈತನನ್ನೇ ಹೊಸ ಕ್ಯಾಪ್ಟನ್ ಮಾಡಿ: ಎಂಐಗೆ ಮಾಜಿ ಕ್ರಿಕೆಟಿಗ ಒತ್ತಾಯ | Hardik Pandya

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್​ ಪಾಂಡ್ಯ
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್​ ಪಾಂಡ್ಯ
Published on

ಪ್ರಮುಖ ಮುಖ್ಯಾಂಶಗಳು

  • 19ನೇ ಐಪಿಎಲ್​ ಆವೃತ್ತಿಯಿಂದ ಮುಂಬೈ ಇಂಡಿಯನ್ಸ್ ಹೊರಗೆ
  • ಕ್ಯಾಪ್ಟನ್​ ಸ್ಥಾನದಿಂದ ಹಾರ್ದಿಕ್​ರನ್ನು ಕೆಳಗಿಳಿಸಿ ಎಂದ ಮಾಜಿ ಕ್ರಿಕೆಟಿಗ
Hardik Pandya: ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಿಂದ ಮುಂಬೈ ಇಂಡಿಯನ್ಸ್​ ಅಧಿಕೃತವಾಗಿ ಹೊರಬಿದ್ದಿದೆ. ಸರಣಿ ಹೀನಾಯ ಸೋಲು ಮತ್ತು ಆಟಗಾರರ ಕಳಪೆ ಪ್ರದರ್ಶನದಿಂದ ತಂಡ ಪೈಪೋಟಿ ಕೊಡದೆಯೇ ಎಲಿಮಿನೇಟ್ ಆಗಿದ್ದು ಸದ್ಯ ಮುಂಬೈ ಫ್ರಾಂಚೈಸಿಯ ಅಭಿಮಾನಿಗಳನ್ನು ಭಾರೀ ಬೇಸರಕ್ಕೆ ದೂಡಿದೆ. ಟೀಮ್​ನ ಸೋಲಿಗೆ ನಾಯಕ ಹಾರ್ದಿಕ್​ ಪಾಂಡ್ಯ ಕಾರಣ ಎಂಬ ಟೀಕೆಗಳು ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಗುಜರಾತ್​ ಟೈಟನ್ಸ್​ ಪಡೆಗೆ ಕ್ಯಾಪ್ಟನ್ ಆಗಿದ್ದ ಸ್ಟಾರ್​ ಆಲ್​ರೌಂಡ್ ಆಟಗಾರ​ ಹಾರ್ದಿಕ್​ ಪಾಂಡ್ಯ, ತಂಡವನ್ನು ಒಂದು ಬಾರಿ ಚಾಂಪಿಯನ್​ ಪಟ್ಟಕೇರಿಸಿ, ಎರಡನೇ ಬಾರಿ ಫೈನಲ್​ವರೆಗೂ ಕೊಂಡೊಯ್ದಿದ್ದರು. ಆದರೆ, ಅದೇ ಮುಂಬೈ ಇಂಡಿಯನ್ಸ್​ಗೆ ಬಂದು ರೋಹಿತ್​ ಶರ್ಮರಿಂದ ನಾಯಕನ ಸ್ಥಾನ ಪಡೆದಿದ್ದೇ ತಡ, ಅವರ ವಿರುದ್ಧ ಸಾಲು ಸಾಲು ಟೀಕೆಗಳು ವ್ಯಕ್ತವಾಯಿತು. ಮತ್ತೊಂದೆಡೆ, ಈ ವರ್ಷದ ಐಪಿಎಲ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್​, ಬೌಲಿಂಗ್, ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿ ಯಾವುದರಲ್ಲೂ ಉತ್ತಮ ಪ್ರದರ್ಶನ ತೋರದೆ ಹೋಗಿದ್ದೇ ಫ್ರಾಂಚೈಸಿಯ ಸೋಲಿಗೆ ಮುಖ್ಯ ಕಾರಣ ಎಂದು ದೂಷಿಸಲಾಗಿದೆ.
ಇಲ್ಲಿ ತಂಡದ ಉಳಿದ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದ್ದಾರೆ ಎಂಬುದನ್ನು ಲೆಕ್ಕಿಸದ ಅನೇಕರು, ಕ್ಯಾಪ್ಟನ್​ ಸ್ಥಾನದಲ್ಲಿರುವ ಹಾರ್ದಿಕ್​ರನ್ನು ಮಾತ್ರ ದೂಷಿಸಿ, ಟೀಕಿಸುತ್ತಿರುವುದು ಆಶ್ಚರ್ಯಕರ. ನಾಯಕನ ಜವಾಬ್ದಾರಿ ತೋರುವಲ್ಲಿ ಪಾಂಡ್ಯ ಎಡವಿದ್ದಾರೆ ಎಂದಿರುವ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​, ಕ್ಯಾಪ್ಟನ್​ ಸ್ಥಾನದಿಂದ ಹಾರ್ದಿಕ್​ಗೆ ಮೊದಲು ಗೇಟ್​ಪಾಸ್​ ಕೊಡಿ ಎಂದು ಫ್ರಾಂಚೈಸಿಗೆ ತಿಳಿಸಿದ್ದಾರೆ. 
ಇಲ್ಲಿ ಫ್ರಾಂಚೈಸಿ ತಮ್ಮ ನಿರ್ಧಾರದ ಬಗ್ಗೆ ಮರು ಪರಿಶೀಲನೆ ಮಾಡಬೇಕು. ಹಾರ್ದಿಕ್ ಪಾಂಡ್ಯರನ್ನು ಕ್ಯಾಪ್ಟನ್​ ಸ್ಥಾನದಿಂದ ಕಳಗಿಳಿಸಿ, ಜಸ್ಪ್ರೀತ್ ಬುಮ್ರಾರನ್ನು ನೂತನ ನಾಯಕನ್ನನಾಗಿ ಮಾಡಬೇಕು ಎಂದು ಮುಂಬೈ ಇಂಡಿಯನ್ಸ್​ಗೆ ತಿಳಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net