ಲಂಡನ್​ನಲ್ಲಿ ಕ್ರಿಕೆಟ್​ ಫ್ಯಾನ್ಸ್​ಗೆ ಬಿಗ್ ಸರ್ಪ್ರೈಸ್​! ಪುಟ್ಟ ಅಭಿಮಾನಿ ಬಳಿ ಪಾಪ್​ ಕಾರ್ನ್​ ಕೇಳಿದ ಧೋನಿ ವಿಡಿಯೋ ವೈರಲ್​

ಪುಟ್ಟ ಅಭಿಮಾನಿ ಜೊತೆ ಮಹೇಂದ್ರ ಸಿಂಗ್ ಧೋನಿ
ಪುಟ್ಟ ಅಭಿಮಾನಿ ಜೊತೆ ಮಹೇಂದ್ರ ಸಿಂಗ್ ಧೋನಿ
Published on

ಪ್ರಮುಖ ಮುಖ್ಯಾಂಶಗಳು

  • ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ
  • ಪಂದ್ಯ ನೋಡಲು ಬಂದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ
  • ಪಾಪ್​ ಕಾರ್ನ್​ ಕೇಳಿದ ಧೋನಿ ವಿಡಿಯೋ ವೈರಲ್
MS Dhoni: ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಆಗಮಿಸಿರುವ ಟೀಮ್ ಇಂಡಿಯಾ ದಿಗ್ಗಜ, ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ, ಎಂದಿನಂತೆ ತಮ್ಮ ತುಂಟತನದಿಂದ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್​ ಪ್ರವಾಸವನ್ನು ಫಾಲೋ ಮಾಡುತ್ತಿರುವ ಕ್ಯಾಪ್ಟನ್​ ಕೂಲ್​, ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್​ನ ಮೊದಲ ಪಂದ್ಯಕ್ಕೆ ಆಗಮಿಸಿದ್ದಾರೆ. ಕ್ಯಾಮರಾಮನ್​ ಕಣ್ಣಿಗೆ ಬಿದ್ದ ಧೋನಿ, ಸ್ಟ್ಯಾಂಡ್‌ನಲ್ಲಿ ಪುಟ್ಟ ಬಾಲಕನ ಪಕ್ಕದಲ್ಲಿ ಕುಳಿತು ಪಾಪ್​ ಕಾರ್ನ್​ ಕೇಳುತ್ತಿರುವ ದೃಶ್ಯ ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ಹರಿದಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಯುವ ಅಭಿಮಾನಿ ಜತೆಗೆ ಕುಳಿತು ತಿನ್ನುವ ಮೂಲಕ ನೀವು ಮತ್ತೊಮ್ಮೆ ಸರಳ ವ್ಯಕ್ತಿ ಎಂಬುದನ್ನು ಸಾಬೀತು ಮಾಡಿದ್ದೀರಿ ಎಂದು ಕಮೆಂಟ್​ ಮಾಡಿದ್ದಾರೆ.
ಆರಂಭದಲ್ಲಿ ಧೋನಿಗೆ ಪಾಪ್​ ಕಾರ್ನ್​ ಕೊಟ್ಟ ಬಾಲಕ, ಸ್ವಲ್ಪ ಸಮಯದ ಬಳಿಕ ಇನ್ನೊಂದು ಎಂದು ಕೇಳಿದ. ಇದಕ್ಕೆ, ಇಲ್ಲ ನನಗೆ ಸಾಕಾಯಿತು ಎನ್ನುವ ಧೋನಿಯ ಮಾತು ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿ ನೀಡಿದೆ. ಪ್ರಸ್ತುತ, ಇಂಗ್ಲೆಂಡ್​ ನೀಡಿರುವ 259 ರನ್​ಗಳ ಗುರಿಯನ್ನು ಬೆನ್ನತ್ತಿರುವ ಟೀಮ್ ಇಂಡಿಯಾಗೆ ಆರಂಭಿಕ ಹಂತದಲ್ಲೇ ರೋಕೊ ಜೋಡಿಯ ವಿಕೆಟ್​ಗಳು ದೊಡ್ಡ ಆಘಾತ ನೀಡಿದೆ.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್​ಗೆ ಆರಂಭಿಕ ಬ್ಯಾಟರ್​ ಬೆನ್​ ಡಕೆಟ್ (43 ರನ್​)​ ಉತ್ತಮ ಆರಂಭವನ್ನೇ ನೀಡಿದರು. ಆದರೆ, ಡಕೆಟ್​ಗೆ ಸರಿಯಾದ ಸಾಥ್​ ನೀಡದ ಜಾಕೆಬ್​ ಬೆಥಲ್​ ಕೇವಲ 14 ರನ್​ಗೆ ಔಟ್​ ಆದರು. ಅವರ ಬೆನ್ನಲ್ಲೇ ಕ್ರೀಸ್​ಗಿಳಿದ ಕ್ಯಾಪ್ಟನ್​ ಹ್ಯಾರಿ ಬ್ರೂಕ್ (1)​, ಜಾಸ್​ ಬಟ್ಲರ್ (5)​, ಸ್ಯಾಮ್​ ಕರನ್ (0)​ ತಂಡಕ್ಕೆ ರನ್​ ಕೊಡುಗೆ ನೀಡುವಲ್ಲಿ ವಿಫಲರಾದರು.
ತಂಡದ ಟಾಪ್​ ಆರ್ಡರ್​ ಬ್ಯಾಟರ್​ಗಳೇ ಬ್ಯಾಕ್​ ಟು ಬ್ಯಾಕ್​ ಕೈಕೊಟ್ಟರು ಅಲುಗಾಡದೆ ಕ್ರೀಸ್​ಗೆ ಅಂಟಿ ನಿಂತ ಜೋ ರೂಟ್​ (76) ಮತ್ತು ಲಿಯಾಮ್​ ಡಾಸನ್​ (68) ಬ್ಯಾಟಿಂಗ್​ ಮೋಡಿ ತಂಡದ ಒಟ್ಟು ಮೊತ್ತವನ್ನು 250ರ ಗಡಿದಾಟಿಸಲು ಸಹಾಯ ಮಾಡಿತು. ಆಲ್​ಔಟ್​ ಆದ ಬ್ರೂಕ್​ ಪಡೆ, 50 ಓವರ್​ನಲ್ಲಿ 258 ರನ್​ ಕಲೆಹಾಕಲಷ್ಟೇ ಶಕ್ತವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net