ಪ್ರಸ್ತುತ, ಐಪಿಎಲ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಸಿಎಸ್ಕೆ, ಇಂದು (ಏ.23) ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಂಕಪಟ್ಟಿಯಲ್ಲಿನ ಜಿಗಿತಕ್ಕೆ ಸೆಣಸಲಿದೆ. ಮತ್ತೊಂದೆಡೆ, ಐಪಿಎಲ್ ಆರಂಭದಿಂದಲೂ ಫಿಟ್ನೆಸ್ ಸಮಸ್ಯೆಗಳಿಂದ ತಂಡದ ಪರ ಆಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ತಮ್ಮ ದರ್ಶನ ಪಡೆಯಲು ತೀವ್ರ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಪದೇ ಪದೇ ನಿರಾಶೆ ಮಾಡುತ್ತಿದ್ದಾರೆ. ಇದರಿಂದ ಸಿಎಸ್ಕೆ ಒಂದೆರೆಡು ಪಂದ್ಯ ಗೆದ್ದರೂ ಅಭಿಮಾನಿಗಳಲ್ಲಿ ಅಂತಹ ಖುಷಿ ಕಾಣುತ್ತಿಲ್ಲ.