ಐಪಿಎಲ್ 2026ರ ಕಣದಲ್ಲಿ ಆಟಗಾರರ ನಡುವಿನ ಸ್ನೇಹ ಮತ್ತು ತಮಾಷೆಯ ಕ್ಷಣಗಳು ಅಭಿಮಾನಿಗಳನ್ನು ಸದಾ ಸೆಳೆಯುತ್ತವೆ
ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಹುಟ್ಟುಹಬ್ಬದಂದು ಧೋನಿ ನೀಡಿದ ಎಕ್ಸ್‌ಪ್ರೆಶನ್ ಫುಲ್ ವೈರಲ್
ಡೆವಾಲ್ಡ್ ಬ್ರೆವಿಸ್ ಅವರ 23 ನೇ ಹುಟ್ಟುಹಬ್ಬದ ಸಮಯದಲ್ಲಿ ಕೇಕ್ ಕತ್ತರಿಸುವ ವೇಳೆ ತಲೆ ಮೇಲೆ ಮೊಟ್ಟೆ ಹೊಡೆದು ಸಂಭ್ರಮ
ಚೆನ್ನೈ: ಐಪಿಎಲ್ 2026ರ ಕಣದಲ್ಲಿ ಆಟಗಾರರ ನಡುವಿನ ಸ್ನೇಹ ಮತ್ತು ತಮಾಷೆಯ ಕ್ಷಣಗಳು ಅಭಿಮಾನಿಗಳನ್ನು ಸದಾ ಸೆಳೆಯುತ್ತವೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಹುಟ್ಟುಹಬ್ಬದಂದು ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ನೀಡಿದಂತಹ ತಮಾಷೆಯ ಕ್ಷಣವೊಂದು ಸಧ್ಯ ಸಾಮಾಜಿಕ ಮಾದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಘಟನೆ ಏನು?
ಡೆವಾಲ್ಡ್ ಬ್ರೆವಿಸ್ ಅವರ 23 ನೇ ಹುಟ್ಟುಹಬ್ಬದ ಸಮಯದಲ್ಲಿ ಕೇಕ್ ಕತ್ತರಿಸುವ ವೇಳೆ ಸಹ ಆಟಗಾರ ಕಾರ್ತಿಕ್ ಶರ್ಮಾ ಬ್ರೆವಿಸ್ ತಲೆಯ ಮೇಲೆ ಮೊಟ್ಟೆಗಳನ್ನು ಹೊಡೆದು ಸಂಭ್ರಮಿಸುತ್ತಿದ್ದರು. ಈ ವೇಳೆ ದೂರದಲ್ಲಿ ನಿಂತಿದ್ದ ಧೋನಿ ತಮ್ಮ ಮುಖವನ್ನು ಕಿವುಚುತ್ತಾ ಕ್ಯೂಟ್ ಎಕ್ಸ್ಪ್ರೇಶನ್ ನೀಡಿದ್ದು, ಅಲ್ಲಿನ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದಾದ ಬಳಿಕ ತಂಡದ ಸದಸ್ಯರು ಅವರನ್ನು ಕೇಕು ಮತ್ತು ಮೊಟ್ಟೆಗಳಿಂದ ಬ್ರೆವಿಸ್ ಅವರ ಮುಖವನ್ನು ಮುಳುಗಿಸಿದ್ದು, ವಿಶೇಷವಾಗಿ ಆಚರಣೆ ಮಾಡಿದರು. ಆದಾಗ್ಯೂ, ಆಚರಣೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಆಟಗಾರರು ತೋರಿಸಿದ ಮೋಜು ಉತ್ಸಾಹಕ್ಕೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ
ಧೋನಿ ಅವರು ಮೈದಾನದಲ್ಲಿ ಎಷ್ಟು ಶಾಂತವೋ, ಮೈದಾನದ ಹೊರಗೆ ಅಷ್ಟೇ ತಮಾಷೆ ಪ್ರವೃತ್ತಿಯವರು. ಬ್ರೆವಿಸ್ ಅವರಿಗೆ ಕೇಕ್ ತಿನ್ನಿಸುವಾಗ ಧೋನಿ ನೀಡಿದ ಈ "ವಿಚಿತ್ರ ಎಕ್ಸ್‌ಪ್ರೆಶನ್" ಈಗ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ನಲ್ಲಿ ಟ್ರೆಂಡ್ ಆಗುತ್ತಿದೆ. ಆದಾಗ್ಯೂ, ಅಭಿಮಾನಿಗಳು ಈ ವಿಡಿಯೋವನ್ನು ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಯುವ ಆಟಗಾರರೊಂದಿಗೆ ಧೋನಿ ಹೊಂದಿರುವ ಈ ಆಪ್ತತೆ ಮತ್ತು ಅವರು ತೋರುವ ಲವಲವಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ಮುಂಬೈ ಇಂಡಿಯನ್ಸ್ VS ಚೆನ್ನೈ ಸೂಪರ್ ಕಿಂಗ್ಸ್
ಈ ಸೀಸನ್ನ ಐಪಿಎಲ್ 2026 ರಲ್ಲಿ ಮಹೇಂದ್ರ ಸಿಂಗ್ ಧೋನಿ ಈವರೆಗೂ ಯಾವುದೇ ಪಂದ್ಯವನ್ನೂ ಆಡಿಲ್ಲ. ಮಂಡಿರಜ್ಜು ಗಾಯದಿಂದ ಅವರನ್ನು ಮೊದಲ ಆರು ಪಂದ್ಯಗಳಿಂದ ಹೊರಗಿಡಲಾಗಿತ್ತು. ಆದಾಗ್ಯೂ, ಶನಿವಾರ (ಮೇ 2) ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ತೀವ್ರ ಪೈಪೋಟಿಯ ಪಂದ್ಯದಲ್ಲಿ ಅವರು ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ (ಏಜೆನ್ಸೀಸ್).