ವಿರಾಟ್ ಕೊಹ್ಲಿ, ರಿಷಭ್ ಪಂತ್, ರುತುರಾಜ್ ಗಾಯಕ್ವಾಡ್ ಮತ್ತು ಇನ್ನೂ ಅನೇಕರು ಗುರುವಾರ ಧೋನಿ ಮನೆಗೆ ಭೇಟಿ ನೀಡಿದ್ದರು. ಧೋನಿ ಮತ್ತು ಕೊಹ್ಲಿ ನಡುವಿನ ಬಾಂಧವ್ಯ ಎಷ್ಟು ಅದ್ಭುತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಭೋಜನದ ನಂತರ, ಸ್ವತಃ ಧೋನಿ ಅವರೇ ಕೊಹ್ಲಿಯನ್ನು ತಮ್ಮ ಸ್ವಂತ ಕಾರಿನಲ್ಲಿ ಟೀಮ್ ಇಂಡಿಯಾ ತಂಗಿದ್ದ ಹೋಟೆಲ್‌ಗೆ ಕರೆದೊಯ್ದರು. ಧೋನಿ ಕಾರು ಚಲಾಯಿಸುತ್ತಿದ್ದಾಗ, ಕೊಹ್ಲಿ ಪಕ್ಕದಲ್ಲೇ ಕುಳಿತಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.