ವರದಿಗಳ ಪ್ರಕಾರ, ಮಂಗಳವಾರ (ಮಾ.03) ಧೋನಿ ರಾಂಚಿಯ ರಿಂಗ್ ರೋಡ್‌ನಲ್ಲಿರುವ ತಮ್ಮ ನಿವಾಸದ ಬಳಿ ವಾಹನ ಚಲಾಯಿಸುತ್ತಿರುವಾಗ ಈ ಘಟನೆ ಬೆಳಕಿಗೆ ಬಂದಿದೆ. ನಗರದಾದ್ಯಂತ ಅಳವಡಿಸಲಾಗಿರುವ ಅತ್ಯಾಧುನಿಕ ಸ್ಮಾರ್ಟ್ ಸಂಚಾರ ಮೇಲ್ವಿಚಾರಣಾ ವ್ಯವಸ್ಥೆಯು ಧೋನಿ ಅವರ ವಾಹನ ನಿಗದಿಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಗುತ್ತಿರುವುದನ್ನು ಪತ್ತೆಹಚ್ಚಿದೆ.