ಆದಾಗ್ಯೂ, ಕಾಲಿನ ಸ್ನಾಯು ಸೆಳೆತದಿಂದಾಗಿ ಇಲ್ಲಿಯವರೆಗೂ ಪಂದ್ಯದಿಂದ ಹೊರಗುಳಿದ ಧೋನಿ ಎಸ್ಆರ್ಎಚ್ ಪಂದ್ಯದಲ್ಲಿ ಆಡುತ್ತಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದೆ ಧೋನಿ ಅವರ ಚೇತರಿಕೆಗೆ ಎರಡು ವಾರಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಮ್ಯಾನೇಜ್ಮೆಂಟ್ ತಿಳಿಸಲಾಗಿತ್ತು. ಇದೀಗ ಆ ಗಡುವು ಮುಗಿದಿದ್ದು, ಧೋನಿ ತಂಡದ ಜೊತೆ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.