ಭಾರತದಲ್ಲಿ ಕ್ರಿಕೆಟ್​ ಆಡುವ ಮಹಿಳೆಯರ ಸಂಖ್ಯೆ ಭಾರಿ ಹೆಚ್ಚಳ!

ಭಾರತದಲ್ಲಿ ಕ್ರಿಕೆಟ್​ ಆಡುವ ಮಹಿಳೆಯರ ಸಂಖ್ಯೆ ಭಾರಿ ಹೆಚ್ಚಳ!
ಭಾರತದಲ್ಲಿ ಕ್ರಿಕೆಟ್​ ಆಡುವ ಮಹಿಳೆಯರ ಸಂಖ್ಯೆ ಭಾರಿ ಹೆಚ್ಚಳ!
Published on
ನವದೆಹಲಿ: ಭಾರತದಲ್ಲಿ 2020ರ ನಂತರದಲ್ಲಿ ಕ್ರಿಕೆಟ್​ನಲ್ಲಿ (cricket) ಮಹಿಳೆಯರ (Indian women) ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಅದರಲ್ಲೂ 14 ರಾಜ್ಯುಗಳಲ್ಲಿ ಮಹಿಳೆಯರು ದುಪ್ಪಟ್ಟು ಸಂಖ್ಯೆಯಲ್ಲಿ ಕ್ರಿಕೆಟ್​ ಆಡುತ್ತಿದ್ದಾರೆ ಎಂದು ಬಿಬಿಸಿ ಅಧ್ಯಯನವೊಂದರಲ್ಲಿ (BBC study) ತಿಳಿದುಬಂದಿದೆ.
ಈ ಮುನ್ನ 2020ರಲ್ಲಿ ನಡೆಸಿದ ಅಧ್ಯಯನದಲ್ಲಿ, ಕ್ರಿಕೆಟ್​ನಲ್ಲಿ ಮಹಿಳೆಯರಿಗಿಂತ ಪುರುಷರು ಐದು ಪಟ್ಟು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಅಂತರ ಈಗ ಭಾರಿ ಇಳಿಕೆಯಾಗಿದೆ. 2026ರ ಹೊಸ ಅಧ್ಯಾಯನದ ಪ್ರಕಾರ, ಮಹಿಳೆಯರಿಗಿಂತ 3 ಪಟ್ಟು ಅಧಿಕ ಪುರುಷರು ಕ್ರಿಕೆಟ್​ ಆಡುತ್ತಿದ್ದಾರೆ. 10 ಸಾವಿರ ಮಹಿಳೆಯರನ್ನು ಮಾತನಾಡಿಸಿ ಈ ಅಧ್ಯಯನ ನಡೆಸಲಾಗಿದೆ. ಇದರನ್ವಯ ಕ್ರಿಕೆಟ್​ ಆಡಲು ಬಯಸುವ ಮಹಿಳೆಯರ ಸಂಖ್ಯೆ ಶೇ. 5ರಿಂದ 10ಕ್ಕೆ ಏರಿಕೆಯಾಗಿದೆ. ಅದರಲ್ಲೂ 15ರಿಂದ 24 ವರ್ಷ ವಯಸ್ಸಿನ ಶೇ.16 ಮಹಿಳೆಯರು ಕ್ರಿಕೆಟ್​ ಆಡಲು ಬಯಸುತ್ತಿದ್ದಾರೆ. ಅಲ್ಲದೆ ಈ ಪೈಕಿ ನಾಲ್ವರಲ್ಲಿ ಓರ್ವ ಮಹಿಳೆ ಕ್ರೀಡೆಯನ್ನೇ ವೃತ್ತೀಜಿವನ ಆಗಿ ಪರಿಗಣಿಸಲು ಸಿದ್ಧರಿದ್ದಾರೆ.

ಕಳೆದ ವರ್ಷ ಭಾರತ ತಂಡ ತವರಿನಲ್ಲೇ ಮಹಿಳಾ ಏಕದಿನ ವಿಶ್ವಕಪ್​ ಗೆದ್ದಿರುವುದು, ಮಹಿಳಾ ಕ್ರಿಕೆಟ್​ ಜನಪ್ರಿಯತೆಗೆ ಕಾರಣವಾಗಿರಬಹುದು ಎಂದು ಅಧ್ಯಯನ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net