ಅಂದಹಾಗೆ, ಐಪಿಎಲ್ 2026ಕ್ಕೂ ಮೊದಲು ಶಮಿ ಅವರನ್ನು ಎಸ್‌ಆರ್‌ಎಚ್‌ನಿಂದ ಎಲ್‌ಎಸ್‌ಜಿಗೆ ಟ್ರೇಡ್ ವಿಂಡೋ ಮೂಲಕ ವಿನಿಮಯ ಮಾಡಿಕೊಳ್ಳಲಾಯಿತು. ಐಪಿಎಲ್ 2025ರಲ್ಲಿ ಎಸ್‌ಆರ್‌ಎಚ್, ಶಮಿ ಅವರನ್ನು 10 ಕೋಟಿ ರೂ.ಗೆ ಖರೀದಿಸಿತು. ಆದರೆ ಎಲ್‌ಎಸ್‌ಜಿ, ಅವರನ್ನು ಅದೇ ಬೆಲೆಗೆ ವಿನಿಮಯ ಮಾಡಿಕೊಂಡಿತು. 2013 ರಲ್ಲಿ ಕೆಕೆಆರ್ ಪರ ಪಾದಾರ್ಪಣೆ ಮಾಡಿದ ಶಮಿ, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಎಸ್‌ಆರ್‌ಎಚ್ ಪರ ಆಡಿದ್ದಾರೆ. ಗುಜರಾತ್ ಟೈಟಾನ್ಸ್ ಪರ 2022 ಮತ್ತು 2023ರ ಸೀಸನ್‌ಗಳಲ್ಲಿ ಕ್ರಮವಾಗಿ 20 ಮತ್ತು 28 ವಿಕೆಟ್‌ಗಳನ್ನು ಕಬಳಿಸಿದರು.