ನವದೆಹಲಿ: ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಬಳಿಕ ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ (Moeen ali) ಕೂಡ ಮುಂದಿನ ವರ್ಷದ ಐಪಿಎಲ್ (IPL) 19ನೇ ಆವೃತ್ತಿಯಿಂದ ಹೊರಗುಳಿದು, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (PSL) ಆಡಲು ನಿರ್ಧರಿಸಿದ್ದಾರೆ. ಇದರಿಂದಾಗಿ ಮೊಯಿನ್ ಅಲಿ ಕೂಡ ಮುಂಬರುವ ಐಪಿಎಲ್ ಹರಾಜು ಪ್ರಕ್ರಿಯೆಯಿಂದಲೂ ಹೊರಗುಳಿಯಲಿದ್ದಾರೆ.
38 ವರ್ಷದ ಮೊಯಿನ್ ಅಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ನಿರ್ಧಾರವನ್ನು ತಿಳಿಸಿದ್ದು, ಪಿಎಸ್ಎಲ್ನ ಹೊಸ ಸವಾಲು ಹೆಚ್ಚಿನ ಕಾತರ ಮೂಡಿಸಿದೆ ಎಂದಿದ್ದಾರೆ. 2018ರಿಂದ ಐಪಿಎಲ್ನಲ್ಲಿ ಆಡುತ್ತ ಬಂದಿರುವ ಮೊಯಿನ್ ಅಲಿ, ಆರ್ಸಿಬಿ, ಸಿಎಸ್ಕೆ ಮತ್ತು ಕೆಕೆಆರ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಐಪಿಎಲ್ನಲ್ಲಿ ಒಟ್ಟು 73 ಪಂದ್ಯ ಆಡಿದ್ದು, 1,167 ರನ್ ಮತ್ತು 41 ವಿಕೆಟ್ ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ 6 ಪಂದ್ಯಗಳನ್ನಷ್ಟೇ ಆಡಿದ್ದ ಮೊಯಿನ್ ಅಲಿ, ಈ ಬಾರಿ ತಂಡದಲ್ಲಿ ರಿಟೇನ್ ಆಗಿರಲಿಲ್ಲ.