ಭಾರತೀಯ ಕಾಲಾಮಾನಕ್ಕೆ ತಕ್ಕಂತೆ ಸಂಜೆ 7:30ಕ್ಕೆ ಶುರುವಾದ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದ ಫಸ್ಟ್ ಇನ್ನಿಂಗ್ಸ್ ಮೈದಾನದಲ್ಲಿದ್ದ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಿತು. ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರ ಸಿಕ್ಸರ್, ಬೌಂಡರಿಗಳ ಸುರಿಮಳೆ ಆರ್ಸಿಬಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಆದರೆ, ದ್ವಿತೀಯ ಇನ್ನಿಂಗ್ಸ್ ಚೇಸಿಂಗ್ಗಿಳಿದ ಎಂಐ, ಪೈಪೋಟಿ ನೀಡಿದ್ದೇ ಆದರೂ ರೋಮಾಂಚಕ ಹಂತಕ್ಕೆ ಕೊಂಡೊಯ್ಯಲಿಲ್ಲ. ಒಟ್ಟಾರೆ, ಈ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗಳು ತಾವೆಷ್ಟು ಸಮಯ ಕುಳಿತಿದ್ದೆವು ಎಂಬ ಸಮಯ ತಿಳಿದು ಇದೀಗ ಅಚ್ಚರಿಗೆ ಒಳಗಾಗಿದ್ದಾರೆ.