201 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭಿಕ ಆಟಗಾರ ರಯಾನ್ ರಿಕೆಲ್ಟನ್ (48 ರನ್) ಸ್ಫೋಟಕ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡಿದ ತಿಲಕ್ ವರ್ಮಾ ಅಜೇಯ 75 ರನ್ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. 19ನೇ ಓವರ್ ಮುಕ್ತಾಯಕ್ಕೆ 186 ರನ್ ಗಳಿಸಿದ್ದ ಮುಂಬೈ, ಕೊನೆಯ ಓವರ್‌ನಲ್ಲಿ ವಿಲ್ ಜ್ಯಾಕ್ಸ್ ಮತ್ತು ತಿಲಕ್ ಅವರ ಸಾಹಸದಿಂದ 205/4 ರನ್ ಗಳಿಸಿ ಗೆಲುವು ಸಂಭ್ರಮಿಸಿತು.