ಪಾಕ್​ ಕ್ರಿಕೆಟಿಗರ ಮೊಬೈಲ್​ ಕಸಿದುಕೊಂಡ ಪಿಸಿಬಿ! ಹೀಗಿದೆ ಕಾರಣ...

ಪಾಕ್​ ಕ್ರಿಕೆಟಿಗರ ಮೊಬೈಲ್​ ಕಸಿದುಕೊಂಡ ಪಿಸಿಬಿ! ಹೀಗಿದೆ ಕಾರಣ...
ಪಾಕ್​ ಕ್ರಿಕೆಟಿಗರ ಮೊಬೈಲ್​ ಕಸಿದುಕೊಂಡ ಪಿಸಿಬಿ! ಹೀಗಿದೆ ಕಾರಣ...
Published on
ಲಂಡನ್​: ಆತಿಥೇಯ ಇಂಗ್ಲೆಂಡ್​ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯಕ್ಕೆ ಪೂರ್ವಭಾವಿಯಾಗಿ ಪಾಕಿಸ್ತಾನ ತಂಡದ ಆಟಗಾರರ ಮೊಬೈಲ್​ ಫೋನ್​ಗಳನ್ನು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ತನ್ನ ವಶಕ್ಕೆ ತೆಗೆದುಕೊಂಡಿದೆ. ಮ್ಯಾಚ್​ ಫಿಕ್ಸಿಂಗ್ (Match-fixing)​ ಭೀತಿಯಿಂದಾಗಿ ಪಿಸಿಬಿ ಈ ಕ್ರಮ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ಪಾಕ್​ ತಂಡ ಇಂಗ್ಲೆಂಡ್​ ವಿರುದ್ಧದ ಮೊದಲ 2 ಟೆಸ್ಟ್​ ಪಂದ್ಯಗಳಲ್ಲಿ ಸೋತು ಈಗಾಗಲೆ ಸರಣಿ ಕೈಚೆಲ್ಲಿದೆ. ಅಂತಿಮ ಪಂದ್ಯ ಬುಧವಾರದಿಂದ ರ್ಬಮಿಂಗ್​ಹ್ಯಾಂನಲ್ಲಿ ನಡೆಯಲಿದೆ. ಪಂದ್ಯದ ಸಮಯದಲ್ಲಿ ಮೊಬೈಲ್​ಗಳನ್ನು ಕ್ರಿಕೆಟಿಗರಿಂದ ದೂರವಿಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಪಂದ್ಯಕ್ಕೆ ಇನ್ನೂ ಕೆಲ ದಿನಗಳು ಬಾಕಿ ಇರುವಾಗಲೇ ಪಿಸಿಬಿ ಮೊಬೈಲ್​ಗಳನ್ನು ವಶಪಡಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಯಾವೆಲ್ಲ ಕ್ರಿಕೆಟಿಗರ ಮೊಬೈಲ್​ಗಳನ್ನು ಪಿಸಿಬಿ ವಶಕ್ಕೆ ಪಡೆದಿದೆ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಅಲ್ಲದೆ ಯಾವ ಕಾರಣಕ್ಕಾಗಿ ಕ್ರಿಕೆಟಿಗರ ಮೊಬೈಲ್​ ಪಡೆದುಕೊಳ್ಳಲಾಗಿದೆ ಎಂಬುದನ್ನು ಪಿಸಿಬಿ ಸ್ಪಷ್ಟವಾಗಿ ವಿವರಿಸಿಲ್ಲ. ಈ ಮೊಬೈಲ್​ಗಳು ಇನ್ನು ಪಂದ್ಯ ಮುಗಿಯುವವರೆಗೂ ಪಿಸಿಬಿ ವಶದಲ್ಲೇ ಇರಲಿವೆ ಎಂದು "ಪಾಕಿಸ್ತಾನಿ 365 ನ್ಯೂಸ್​' ವರದಿ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net