

ಬೆಂಗಳೂರು: ಸಿಲಿಕಾನ್ ಸಿಟಿಯ ಮ್ಯಾರಥಾನ್ ಪ್ರಿಯರನ್ನು ಒಂದೇ ವೇದಿಕೆಯಡಿ ತರುವ ಡ್ಯಾಶ್ ಬೆಂಗಳೂರು ಹಾಫ್ ಮ್ಯಾರಥಾನ್ (ಡಿಬಿಎಚ್ಎಂ) ಕಾರ್ಯಕ್ರಮದ ಎರಡನೇ ಆವೃತ್ತಿಯು ಬೆಂಗಳೂರಿನ ಹೃದಯಭಾಗದಲ್ಲಿ ಅದ್ದೂರಿಯಾಗಿ ಆಯೋಜನೆಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಕ್ರೀಡಾ ಕಾರ್ಯಕ್ಷಮತೆ, ಸಾಮಾಜಿಕ ಕಳಕಳಿ ಹಾಗೂ ಸಮುದಾಯದ ಸಹಭಾಗಿತ್ವವನ್ನು ಒಳಗೊಂಡ ಈ ವಿಶಿಷ್ಟ ಕ್ರೀಡಾಕೂಟವು ಈ ಬಾರಿ ಕಂಠೀರವ ಕ್ರೀಡಾಂಗಣವನ್ನು ಕೇಂದ್ರವಾಗಿರಿಸಿಕೊಂಡು ನಡೆಯಲಿದೆ.