'ಕ್ರಿಕ್ಬಜ್' ಜೊತೆ ಮಾತನಾಡಿದ ತಿವಾರಿ, "ತನ್ನ ವಿಕೆಟ್ ಕಾಪಾಡಿಕೊಳ್ಳಲು ಆಗಲಿಲ್ಲ ಎಂದರೆ, ಇಂತಹ ಕಳಪೆ ಪ್ರದರ್ಶನ ಬಂದೇ ಬರುತ್ತದೆ. ಅತೀ ಕಡಿಮೆ ಸಮಯದಲ್ಲಿ ಸ್ಟಾರ್ಗಿರಿ ಪಡೆದಿರುವ ಅಭಿಷೇಕ್, ಸೂಪರ್ಸ್ಟಾರ್ ಆಗಿಯೇ ಉಳಿಯಬೇಕು ಎಂದು ಬಯಸಿದರೆ, ಮುಂದಿನ ಪಂದ್ಯಗಳನ್ನು ತನ್ನ ತಂಡಕ್ಕಾಗಿ ಗೆಲ್ಲಲೇಬೇಕು. ಇಲ್ಲಿ ತುಂಬ ಕಾಂಪಿಟೇಶನ್ ಇದೆ. ಪಂದ್ಯ ಗೆಲ್ಲಿಸಿ ಕೊಡುವವರು ಹೆಚ್ಚಿದ್ದಾರೆ. ಹೀಗಾಗಿ, ಅವರನ್ನೆಲ್ಲ ಅಭಿ ಓವರ್ಟೇಕ್ ಮಾಡಬೇಕಿದೆ. ಇಲ್ಲಿ ಆತ ಮೊದಲು ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು" ಎಂದರು.