ವಿಸ್ಮಯ ಮೂಡಿಸಿದ ಕನ್ನಡಿಗ ಮನೀಷ್​ ಪಾಂಡೆ ಅದ್ಭುತ ಕ್ಯಾಚ್​!

ವಿಸ್ಮಯ ಮೂಡಿಸಿದ ಕನ್ನಡಿಗ ಮನೀಷ್​ ಪಾಂಡೆ ಅದ್ಭುತ ಕ್ಯಾಚ್​!
ವಿಸ್ಮಯ ಮೂಡಿಸಿದ ಕನ್ನಡಿಗ ಮನೀಷ್​ ಪಾಂಡೆ ಅದ್ಭುತ ಕ್ಯಾಚ್​!
Published on
ರಾಯ್ಪುರ: ಆರ್​ಸಿಬಿ (RCB) ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ ಪರ ಕನ್ನಡಿಗ ಮನೀಷ್​ ಪಾಂಡೆ (Manish pandey) ಹಿಡಿದ ಟಿಮ್​ ಡೇವಿಡ್​ ಅವರ ಅದ್ಭುತ ಕ್ಯಾಚ್​ ಎಲ್ಲರ ಮನಗೆದ್ದಿದೆ. ಬ್ಯಾಕ್​ವರ್ಡ್​ ಪಾಯಿಂಟ್​ನಲ್ಲಿದ್ದ ಮನೀಷ್​, ಎಡಗಡೆಗೆ ಹಾರಿ ಹಿಡಿದ ಕ್ಯಾಚ್​ ಎಲ್ಲರಿಗೂ ವಿಸ್ಮಯ ತಂದಿತು. ಬೌಲರ್​ ಕಾರ್ತಿಕ್​ ತ್ಯಾಗಿ ಕೂಡ ಈ ಹಿಡಿದಿದ್ದನ್ನು ನಂಬಲಾಗದೆ ಅಚ್ಚರಿ ಪಟ್ಟರು.

ಟಿವಿ ಅಂಪೈರ್​ ಮರುಪ್ರಸಾರವನ್ನು ಪರಿಶೀಲಿಸಿ ಕ್ಯಾಚ್​ ಕ್ಲೀನ್​ ಎಂದರು. ಆಗ ಮೈದಾನದಲ್ಲಿದ್ದ ವಿರಾಟ್​ ಕೊಹ್ಲಿ ಕೂಡ ಈ ಕ್ಯಾಚ್​ ನೋಡಿ ಅಚ್ಚರಿಪಟ್ಟಿದ್ದಲ್ಲದೆ, ಮನೀಷ್​ ಪಾಂಡೆ ಅವರನ್ನು ಅಪ್ಪಿ ಅಭಿನಂದಿಸಿದರು. 2008ರಲ್ಲಿ ಕೊಹ್ಲಿ ನಾಯಕತ್ವದಲ್ಲಿ 19 ವಯೋಮಿತಿ ವಿಶ್ವಕಪ್​ ಗೆದ್ದ ತಂಡದಲ್ಲಿ ಮನೀಷ್​ ಕೂಡ ಇದ್ದರು. ಅಲ್ಲದೆ 2009&10ರಲ್ಲಿ ಇಬ್ಬರೂ ಆರ್​ಸಿಬಿ ಪರ ಜತೆಯಾಗಿ ಆಡಿದ್ದರು.

36 ವರ್ಷದ ಮನೀಷ್​ ಕಳೆದ 10 ತಿಂಗಳಿನಿಂದ ಹೆಚ್ಚಿನ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡದ ನಡುವೆಯೂ ಇಂಥ ಚುರುಕುತನ ಉಳಿಸಿಕೊಂಡಿರುವುದು ಕೂಡ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ವೀಕ್ಷಕ ವಿವರಣೆಕಾರ ಆಕಾಶ್​ ಚೋಪ್ರಾ ಇದನ್ನು ಟೂರ್ನಿ ಇತಿಹಾಸದ ಅತ್ಯುತ್ತಮ ಕ್ಯಾಚ್​ಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ.

"ಹಾಲಿ ಆವೃತ್ತಿಯಲ್ಲಿ ಇದುವರೆಗೆ ಸುಮಾರು 175 ಕ್ಯಾಚ್​ಗಳು ಕೈಚೆಲ್ಲಲ್ಪಟ್ಟಿವೆ. ಇದರ ನಡುವೆ ಇಂಥ ರತ್ನದಂಥ ಕ್ಯಾಚ್​ ನೋಡಲು ಸಿಕ್ಕಿದೆ. ಮನೀಷ್​ ಎಡಗೈಯಲ್ಲಿ ಎಷ್ಟು ಅದ್ಭುತವಾಗಿ ಈ ಕ್ಯಾಚ್​ ಹಿಡಿದರೆಂದರೆ, ಅಂಪೈರ್​ಗಳು ಎರಡೆರಡು ಬಾರಿ ಮರುಪ್ರಸಾರದಲ್ಲಿ ಪರಿಶೀಲಿಸಬೇಕಾಯಿತು. ಇದು ನಿಜಕ್ಕೂ ಮನೀಷ್​ ಪಾಂಡೆಯೇ ಅಥವಾ ಗ್ಲೆನ್​ ಫಿಲಿಪ್ಸ್​ ಅವರೇ ಎಂದೂ ಅಂಪೈರ್​ ಪರಿಶೀಲಿಸಿದಂತಿತ್ತು' ಎಂದು ಆಕಾಶ್​ ಚೋಪ್ರಾ ಪ್ರಶಂಸಿಸಿದ್ದಾರೆ.

ಐಪಿಎಲ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಹೊಂದಿರುವ ಮನೀಷ್​ ಪಾಂಡೆ, ಎಲ್ಲ 19 ಆವೃತ್ತಿ ಆಡಿರುವ ಕೇವಲ ಮೂವರು (ಕೊಹ್ಲಿ, ರೋಹಿತ್​ ಶರ್ಮ) ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net