ಮದುವೆ ಮುರಿದುಬಿದ್ದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸ್ಮೃತಿ!

ಮದುವೆ ಮುರಿದುಬಿದ್ದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸ್ಮೃತಿ!
ಮದುವೆ ಮುರಿದುಬಿದ್ದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸ್ಮೃತಿ!
Published on
ನವದೆಹಲಿ: ನಾನು ಕ್ರಿಕೆಟ್​ಗಿಂತ ಹೆಚ್ಚಾಗಿ ಬೇರೇನನ್ನೂ ಪ್ರೀತಿಸಲಾರೆ. ಭಾರತ ತಂಡದ ಜೆರ್ಸಿ ಧರಿಸುವುದೇ ಎಲ್ಲಕ್ಕಿಂತ ಹೆಚ್ಚು ಉತ್ತೇಜನ ನೀಡುತ್ತದೆ. ಕ್ರಿಕೆಟ್​ ವಿಚಾರ ಬಂದಾಗ ಎಲ್ಲ ಸಮಸ್ಯೆಗಳನ್ನೂ ಬದಿಗಿಡುತ್ತೇನೆ ಮತ್ತು ಆಟದ ಬಗ್ಗೆ ಮಾತ್ರ ಗಮನಹರಿಸುತ್ತೇನೆ ಎಂದು ಭಾರತ ತಂಡದ ಉಪನಾಯಕಿ ಸ್ಮೃತಿ ಮಂದನಾ (Smriti Mandhana) ಹೇಳಿದ್ದಾರೆ. ಈ ಮೂಲಕ ಮದುವೆ ಮುರಿದುಬಿದ್ದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದೂ ಪರೋಕ್ಷವಾಗಿ ಸಾರಿದರು.

ದೀರ್ಘಕಾಲದ ಗೆಳೆಯ ಪಲಾಶ್​ ಮುಚ್ಚಲ್​ ಜತೆಗಿನ ಮದುವೆ (
marriage) ಕೊನೇಕ್ಷಣದಲ್ಲಿ ಮುರಿದುಬಿದ್ದ ಆಘಾತದ ಬಳಿಕ ಬುಧವಾರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸ್ಮೃತಿ ಮಂದನಾ, ಅಮೇಜಾನ್​ ಸಂಭಾವನಾ ಶೃಂಗಸಭೆಯಲ್ಲಿ ತನ್ನ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿನ ಅನುಭವಗಳನ್ನು ಹಂಚಿಕೊಂಡರು.
ಕ್ರಿಕೆಟ್​ ಮೇಲಿನ ಪ್ರೀತಿ ಇನ್ನೂ ಕುಗ್ಗಿಲ್ಲ. ಬ್ಯಾಟಿಂಗ್​ ಯಾವಾಗಲೂ ಆನಂದ ನೀಡುತ್ತದೆ. ನಾನು ಯಾವಾಗಲೂ ವಿಶ್ವ ಚಾಂಪಿಯನ್​ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿದ್ದೆ. ನಮ್ಮ ನಿರಂತರ ಹೋರಾಟಕ್ಕೆ ಈ ವಿಶ್ವಕಪ್​ ಗೆಲುವಿನ ಬಹುಮಾನ ಒಲಿದಿದೆ. ನಾವು ಇದಕ್ಕಾಗಿ ಹಾತೊರೆಯುತ್ತಿದ್ದೆವು. ವಿಶ್ವಕಪ್​ ಗೆಲುವು ನಮ್ಮ ಪಾಲಿಗೆ ವಿಶೇಷ ಕ್ಷಣವಾಗಿತ್ತು. ಎಂದು ಸ್ಮೃತಿ ಏಕದಿನ ವಿಶ್ವಕಪ್​ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಭಾರತ ತಂಡದ ನಾಯಕಿ ಹರ್ಮಾನ್​ಪ್ರೀತ್​ ಕೌರ್​ ಕೂಡ ಈ ಸಮಾರಂಭದಲ್ಲಿ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net