ಐಸಿಸಿ ವಿಶ್ವಕಪ್​ ತಂಡದಲ್ಲಿ ಸ್ಮೃತಿ, ದೀಪ್ತಿ, ಜೆಮೀಮಾ

ಐಸಿಸಿ ವಿಶ್ವಕಪ್​ ತಂಡದಲ್ಲಿ ಸ್ಮೃತಿ, ದೀಪ್ತಿ, ಜೆಮೀಮಾ
ಐಸಿಸಿ ವಿಶ್ವಕಪ್​ ತಂಡದಲ್ಲಿ ಸ್ಮೃತಿ, ದೀಪ್ತಿ, ಜೆಮೀಮಾ
Published on
ದುಬೈ: ಮಹಿಳಾ ಏಕದಿನ ವಿಶ್ವಕಪ್​ ಮುಕ್ತಾಯದ ಬಳಿಕ ಐಸಿಸಿ (ICC) ಪ್ರಕಟಿಸಿರುವ ಟೂರ್ನಿಯ ತಂಡದಲ್ಲಿ ಚಾಂಪಿಯನ್​ ಭಾರತ ತಂಡದ ಮೂವರು ಆಟಗಾತಿಯರು ಸ್ಥಾನ ಪಡೆದಿದ್ದಾರೆ. ಅವರೆಂದರೆ ಸ್ಮೃತಿ ಮಂದನಾ, ದೀಪ್ತಿ ಶರ್ಮ ಮತ್ತು ಜೆಮೀಮಾ ರೋಡ್ರಿಗಸ್​. ದಣ ಆಫ್ರಿಕಾದ ಲಾರಾ ವೊಲ್ವಾರ್ಡ್​ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮಾರಿಜಾನ್ನೆ ಕಾಪ್​ ಮತ್ತು ನಾಡಿನ್​ ಡಿ ಕ್ಲರ್ಕ್​ ತಂಡದಲ್ಲಿರುವ ರನ್ನರ್​ಅಪ್​ ದಣ ಆಫ್ರಿಕಾದ ಇನ್ನಿಬ್ಬರು ಆಟಗಾರ್ತಿಯರು.

ಐಸಿಸಿ ಮಹಿಳಾ ವಿಶ್ವಕಪ್​ ತಂಡ: ಸ್ಮೃತಿ ಮಂದನಾ, ಲಾರಾ ವೊಲ್ವಾರ್ಡ್​, ಜೆಮೀಮಾ, ಕಾಪ್​, ಆಶ್​ ಗಾರ್ಡ್​ನರ್​ (ಆಸ್ಟ್ರೆಲಿಯಾ), ದೀಪ್ತಿ ಶರ್ಮ, ಆನ್ನಾಬೆಲ್​ ಸುದರ್​ಲ್ಯಾಂಡ್​ (ಆಸ್ಟ್ರೆಲಿಯಾ), ನಾಡಿನ್​ ಡಿ ಕ್ಲರ್ಕ್​, ಸಿದ್ರಾ ನವಾಜ್​ (ಪಾಕಿಸ್ತಾನ), ಅಲನಾ ಕಿಂಗ್​ (ಆಸ್ಟ್ರೆಲಿಯಾ), ಸೋಫಿ ಎಕ್ಲೆಸ್ಟೋನ್​ (ಇಂಗ್ಲೆಂಡ್​), 12ನೇ ಆಟಗಾರ್ತಿ: ನಾಟ್​ ಸೀವರ್​ ಬ್ರಂಟ್​ (ಇಂಗ್ಲೆಂಡ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net