ಕೊಹ್ಲಿ, ರೋಹಿತ್​ ಅನುಕೂಲಕ್ಕೆ ತಕ್ಕಂತ ಆಯ್ಕೆ ಬಿಟ್ಟಾಕಿ! ಬಿಸಿಸಿಐಗೆ ಮಾಜಿ ಕ್ರಿಕೆಟಿಗನ ಖಡಕ್ ಸಂದೇಶ

ಟೀಮ್ ಇಂಡಿಯಾ ಬ್ಯಾಟರ್​ಗಳು
ಟೀಮ್ ಇಂಡಿಯಾ ಬ್ಯಾಟರ್​ಗಳು
Published on

ಪ್ರಮುಖ ಮುಖ್ಯಾಂಶಗಳು

  • ರೋಹಿತ್​ ಶರ್ಮಗೆ ಮಣೆ ಹಾಕಿದ ಬಿಸಿಸಿಐ ನಡೆಗೆ ಮಾಜಿ ಕ್ರಿಕೆಟಿಗ ಗರಂ
  • ಎರಡು ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್​ಗೆ ಸ್ಥಾನ ಕೊಡದಿರುವುದೇ ಇದಕ್ಕೆ ಕಾರಣ
ನವದೆಹಲಿ: ಜುಲೈನಿಂದ ಆರಂಭವಾಗಲಿರುವ ಇಂಗ್ಲೆಂಡ್-ಐರ್ಲೆಂಡ್​ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಸನ್ನದ್ಧವಾಗಿದ್ದು, 50 ಓವರ್​ ತಂಡದಲ್ಲಿ ಯಾರನ್ನೆಲ್ಲ ಆಡಿಸಬೇಕು ಎಂಬ ಬಿಸಿಸಿಐ ಲೆಕ್ಕಾಚಾರ ಸದ್ಯ ಕೆಲವರಲ್ಲಿ ಇರಿಸು-ಮುರಿಸು ತಂದಿದೆ. ದಿಗ್ಗಜ ಆಟಗಾರ ರೋಹಿತ್ ಶರ್ಮಗೆ ಮಣೆ ಹಾಕಿರುವ ಕ್ರಿಕೆಟ್​ ಮಂಡಳಿ, ಎರಡು ಶತಕ ಬಾರಿಸಿದ ಯುವ ಬ್ಯಾಟರ್​ಗೆ ಅವಕಾಶ ನೀಡದಿರುವುದೇ ಈ ಮನಸ್ತಾಪಕ್ಕೆ ಕಾರಣವಾಗಿದೆ.
ರೋಹಿತ್ ಅವರ ಅನುಭವ ಮತ್ತು ಕ್ಲಾಸ್ ಇನ್ನಿಂಗ್ಸ್​ ಬಗ್ಗೆ ಇಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಆಡಿದ ಮೂರು ಪಂದ್ಯಗಳಲ್ಲಿ ಎರಡು ಶತಕ ಬಾರಿಸಿರುವ ಯುವ ಬ್ಯಾಟಿಂಗ್ ಪ್ರತಿಭೆ ಯಶಸ್ವಿ ಜೈಸ್ವಾಲ್​ರನ್ನು ಆಯ್ಕೆಯಿಂದ ಕೈಬಿಟ್ಟ ಬಿಸಿಸಿಐ ನಿರ್ಧಾರದ ಬಗ್ಗೆ ಮಾಜಿ ಭಾರತೀಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಸಮಾದಾನ ಹೊರಹಾಕಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 116 ರನ್, ನಂತರ ಅಫ್ಘಾನಿಸ್ತಾನ ಎದುರು ಸರಣಿಯ ಮೂರನೇ ಪಂದ್ಯದಲ್ಲಿ ಅಜೇಯ 110 ರನ್ ದಾಖಲಿಸಿದ್ದಾರೆ. ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿದರೂ ಸಹ ಆಯ್ಕೆಗಾರರು ಯಶಸ್ವಿಯನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿರುವುದು ಸರಿಯಲ್ಲ. ಜೈಸ್ವಾಲ್ ತಮಗೆ ಸಿಕ್ಕ ಅವಕಾಶಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಇಷ್ಟು ಒಳ್ಳೆಯ ಫಾರ್ಮ್‌ನಲ್ಲಿದ್ದರೂ ಅವರನ್ನು ತಂಡದಿಂದ ಹೊರಗಿಟ್ಟಿರುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ಕೇವಲ ದೈತ್ಯರ ಹೆಸರುಗಳನ್ನು ನೋಡಿ ನಿರ್ಧಾರ ತೆಗೆದುಕೊಳ್ಳುವ ಸಂಸ್ಕೃತಿ ಈಗಲೂ ಇದೆ. ಆಯ್ಕೆ ಪ್ರಕ್ರಿಯೆಯು ರೋಹಿತ್, ವಿರಾಟ್ ಕೊಹ್ಲಿ ಅಥವಾ ಬುಮ್ರಾ ಅವರಂತಹ ವೈಯಕ್ತಿಕ ಆಟಗಾರರ ಹಿತಾಸಕ್ತಿಗಿಂತ, ಟೀಮ್ ಇಂಡಿಯಾಗೆ ಯಾವುದು ಒಳ್ಳೆಯದು ಮತ್ತು ಸೂಕ್ತ ಎಂಬುದರ ಆಧಾರದ ಮೇಲೆ ನಡೆಯಬೇಕು ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net