ಅಗಸ್ತ್ಯನ ರಕ್ಷಣೆಗೆ ನಿಂತ ಮಹೀಕಾ..ಫೋಟೋಗ್ರಾಫರ್ಸ್ ವಿರುದ್ಧ ರೊಚ್ಚಿಗೆದ್ದಿದ್ದೇಕೆ ಹಾರ್ದಿಕ್ ಪಾಂಡ್ಯ ಗೆಳತಿ..? Mahieka Sharma

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯನನ್ನು ಕ್ಯಾಮರಾದಿಂದ ರಕ್ಷಿಸಲು ಮಹೀಕಾ ಶರ್ಮಾ ಪರದಾಟ
  • ಮಗುವಿನ ಕಣ್ಣಿಗೆ ತೊಂದರೆಯಾಗುತ್ತಿದೆ, ದಯವಿಟ್ಟು ಫ್ಲ್ಯಾಶ್ ಬಳಸಬೇಡಿ ಎಂದಿದ್ದೇಕೆ ಮಹೀಕಾ?
  • ಮಹೀಕಾ ತೋರಿದ ಕಾಳಜಿ ಮತ್ತು ಜವಾಬ್ದಾರಿಯುತ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​
Mahieka Sharma: ಐಪಿಎಲ್ 2026ರ ಕಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ಒಂದೆಡೆಯಾದರೆ, ಮೈದಾನದ ಹೊರಗಿನ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಭಾನುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್​ ಪಂದ್ಯದ ನಂತರ  ಮುಂಬೈ ಇಂಡಿಯನ್ಸ್​ ನಾಯಕ ಹಾರ್ದಿಕ್​ ಪಾಂಡ್ಯಾ ಗೆಳತಿ ಮಹೀಕಾ ಶರ್ಮಾ, ಅಗಸ್ತ್ಯ ಅವರ ರಕ್ಷಣೆಗೆ ನಿಂತ ರೀತಿ ಇದೀಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಛಾಯಾಗ್ರಾಹಕರ ವಿರುದ್ಧ ಗರಂ ಆದ ಮಹೀಕಾ ಶರ್ಮಾ

ಭಾನುವಾರ ಪಂದ್ಯ ಮುಗಿದ ನಂತರ ಮಹೀಕಾ ಶರ್ಮಾ ಹಾರ್ದಿಕ್​ ಪುತ್ರ ಅಗಸ್ತ್ಯನ ಜೊತೆ ಕ್ರೀಡಾಂಗಣದಿಂದ ಹೊರಬಂದರು. ಈ ವೇಳೆ ತಮ್ಮ ಕಾರಿನತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಅವರನ್ನು ಸುತ್ತುವರೆದಿರುವ ಹಲವಾರು ಛಾಯಾಗ್ರಾಹಕರು ಅವರ ಫೋಟೋಗಳನ್ನು ತೆಗೆಯಲು ಆರಂಭಿಸಿದರು. 
ಕ್ಯಾಮೆರಾದ ಫ್ಲಾಶ್​ಗಳು ಅಗಸ್ತ್ಯ ಅವರ ಕಣ್ಣುಗಳಿಗೆ ನೋವು ಮಾಡುತ್ತಿರುವುದನ್ನು ಅರಿತುಕೊಂಡ ಮಹೀಕಾ, ಮಗುವಿನ ಕಣ್ಣಿಗೆ ತೊಂದರೆಯಾಗುತ್ತಿದೆ, ದಯವಿಟ್ಟು ಫ್ಲ್ಯಾಶ್ ಬಳಸಬೇಡಿ. ನಮಗೆ ಹೋಗಲು ದಾರಿ ಮಾಡಿಕೊಡಿ ಎಂದು ಎಚ್ಚರಿಸುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. 

ಮಹೀಕಾ ಬಂದ ಮೇಲೆ ಬರೀ ಗೆಲುವೇ...: ಹಾರ್ದಿಕ್ ಪಾಂಡ್ಯ 

2026 ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಹಾರ್ದಿಕ್​ ತಮ್ಮ ವೈಯಕ್ತಿಕ ಜೀವನದ ಸಿಹಿ ಸುದ್ಧಿಯೊಂದನ್ನು ಹಂಚಿಕೊಂಡಿದ್ದು, ಪಂದ್ಯದ ಉದ್ದಕ್ಕೂ ನನ್ನ ನೆರಳಿನಂತೆ ಇದ್ದ ಗೆಳತಿ ಮಹೀಕಾ ಶರ್ಮಾ ಅವರು ಈ ಗೆಲುವಿನ ಹಿಂದಿನ ಶಕ್ತಿ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದರು. 
ನಾವು ಗೆಲ್ಲುತ್ತೇವೆ ಅಂತ ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ. ಪಂದ್ಯ ಮುಗಿದ ಮೇಲೆ ನಾವು ಟ್ರೋಫಿಯೊಂದಿಗೆ ಬರುತ್ತೇವೆ ಎಂದು ನನಗೆ ಮೊದಲೇ ತಿಳಿದಿತ್ತು. ಮಹೀಕಾಗೂ ಇದನ್ನೇ ಹೇಳಿದ್ದೆ  ಎಂದು ಹೇಳಿದರು. 
ನಾನು ಇನ್ನೂ ಹತ್ತು ವರ್ಷಗಳ ಕಾಲ ತಂಡಕ್ಕಾಗಿ ಆಡಬೇಕು ಮತ್ತು ಇನ್ನೂ ಹತ್ತು ಪ್ರಶಸ್ತಿಗಳನ್ನು ಗೆಲ್ಲಬೇಕು. ಮತ್ತು ನಾನು ಪ್ರಾಮಾಣಿಕವಾಗಿ ಒಂದು ವಿಷಯ ಹೇಳಲು ಬಯಸುತ್ತೇನೆ. ಮಹೀಕಾ ನನ್ನ ಜೀವನದಲ್ಲಿ ಬಂದಾಗಿನಿಂದ, ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಗೆಲುವಿನ ನಂತರ ಗೆಲುವು ಬಂದಿದೆ ಎಂದರು.
ನಟಿ ಮತ್ತು ಮಾಡೆಲ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹೀಕಾ ಶರ್ಮಾ, ತಾನಿಷ್ಕ್, ಯುನಿಕ್ಲೋ ಮತ್ತು ವಿವೋ ಸೇರಿದಂತೆ ಹಲವು ಬ್ರ್ಯಾಂಡ್‌ಗಳಿಗೆ ಸಂಗೀತ ವೀಡಿಯೊಗಳು, ಸ್ವತಂತ್ರ ಸಿನಿಮಾ ಮತ್ತು ಉನ್ನತ ಮಟ್ಟದ ವಾಣಿಜ್ಯ ಪ್ರಚಾರಗಳಲ್ಲಿ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net