Maharaja Trophy KSCA T20:ಮಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಶಿವಮೊಗ್ಗ ತಂಡಗಳ ಬಲಾಬಲ ಹೀಗಿದೆ!

ಮಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಶಿವಮೊಗ್ಗ ತಂಡಗಳ ಬಲಾಬಲ ಹೀಗಿದೆ!
ಮಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಶಿವಮೊಗ್ಗ ತಂಡಗಳ ಬಲಾಬಲ ಹೀಗಿದೆ!
Published on
ಬೆಂಗಳೂರು: ಭಾರತ ಟೆಸ್ಟ್ ತಂಡದ ಆಟಗಾರ ಕರುಣ್ ನಾಯರ್ ಮುಂಬರುವ ಐದನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದರು. ಪ್ರತಿಷ್ಠಿತ ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ಶುಕ್ರವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅವರು 18 ಲಕ್ಷ ರೂ.ಗಳಿಗೆ ಹೊಸ ಫ್ರಾಂಚೈಸಿ  ಕೋಸ್ಟಲ್ ಕಿಂಗ್ಸ್ ಮಂಗಳೂರು ಪಾಲಾದರು. 
ಎಡಗೈ ಬ್ಯಾಟರ್ ಆರ್. ಸ್ಮರಣ್ 2ನೇ ಗರಿಷ್ಠ ಮೌಲ್ಯಕ್ಕೆ ಮತ್ತೊಂದು ಹೊಸ ಫ್ರಾಂಚೈಸಿ ಶಿವಮೊಗ್ಗ ಯೋಧಾಸ್‌ಗೆ 15.70 ಲಕ್ಷ ರೂ.ಗಳಿಗೆ ಸೇರ್ಪಡೆಯಾದರು. ಭಾರತ ಟೆಸ್ಟ್-ಏಕದಿನ ತಂಡದ ಕಾಯಂ ಸದಸ್ಯ ಕೆಎಲ್ ರಾಹುಲ್ ಟೂರ್ನಿಗೆ ಅಲಭ್ಯರಾಗಲಿದ್ದು, ಹರಾಜಿನಲ್ಲಿ ಸೇಲಾಗದೆ ಉಳಿದರು.   
ಬೆಂಗಳೂರು ಬ್ಲಾಸ್ಟರ್ಸ್‌ (Bengaluru Blasters)
ಶುಭಾಂಗ್ ಹೆಗ್ಡೆ (₹11 ಲಕ್ಷ), ಪ್ರವೀಣ್ ದುಬೆ (₹9.50ಲಕ್ಷ), ಶ್ರೀಜಿತ್ ಕೆಎಲ್ (₹9ಲಕ್ಷ), ರೋಹನ್ ಪಾಟೀಲ್ (₹5.75 ಲಕ್ಷ), ವಿದ್ವತ್ ಕಾವೇರಪ್ಪ (₹5 ಲಕ್ಷ), ವಹಿದ್ ಖಾನ್ (3.80 ಲಕ್ಷ), ಶ್ರೀವತ್ಸ ಆಚಾರ್ಯ (₹2.60 ಲಕ್ಷ), ರೋಹನ್ ನವೀನ್ (₹1.70 ಲಕ್ಷ), ಶಿವರಾಜ್ ಎಸ್ (₹1.80 ಲಕ್ಷ), ಸಮಿತ್ ದ್ರಾವಿಡ್ (₹1.50 ಲಕ್ಷ), ಶಶಿಕುಮಾರ್ ಕೆ (₹1.30 ಲಕ್ಷ), ಇಶಾನ್ ಎಸ್ (₹50 ಸಾವಿರ), ನಿಶ್ಚಿತ್ ಎನ್ ರಾವ್ (₹50 ಸಾವಿರ), ವಿಜಯ್‌ರಾಜ್ (₹50 ಲಕ್ಷ), ಭುವನ್ ರಾಜ್ (₹30 ಲಕ್ಷ), ನಮನ್ (₹30 ಲಕ್ಷ), ದರ್ಶನ್ ಎಂಬಿ (₹30 ಸಾವಿರ). ಒಟ್ಟು ಆಟಗಾರರು: 18, ವೆಚ್ಚ:₹55.85 ಲಕ್ಷ, ಉಳಿಕೆ: ₹4.15 ಲಕ್ಷ.
ಗುಲ್ಬರ್ಗಾ ಮಿಸ್ಟಿಕ್ಸ್ (Gulbarga Mystics)
ಮನೀಷ್ ಪಾಂಡೆ (₹12.75 ಲಕ್ಷ), ಮ್ಯಾಕ್ನೀಲ್ ನೊರೊನ್ಹಾ (₹12.25 ಲಕ್ಷ), ಮೇಲು ಕ್ರಾಂತಿ ಕುಮಾರ್ (₹8.75 ಲಕ್ಷ), ಶರತ್ ಬಿಆರ್ (₹5.75 ಲಕ್ಷ), ಧ್ರುವ ಪ್ರಭಾಕರ್ (₹4.25 ಲಕ್ಷ), ಪರಸ್ ಗುರ್ಬಕ್ಸ ಆರ್ಯ (₹3.60 ಲಕ್ಷ), ತಿಪ್ಪಾ ರೆಡ್ಡಿ (₹2 ಲಕ್ಷ), ಲೋಚನ್ ಎಸ್ ಗೌಡ (₹2.20 ಲಕ್ಷ), ಪ್ರಖರ್ ಚತುರ್ವೇದಿ (₹1.90 ಲಕ್ಷ), ರೋನಿತ್ ಮೋರೆ (₹1.40 ಲಕ್ಷ), ಆದಿತ್ಯ ನಾಯರ್ (₹1.20 ಲಕ್ಷ), ಗೌತಮ್ ಮಿಶ್ರಾ (₹1 ಲಕ್ಷ), ಶಾನ್ ಟ್ರಿಸ್ಟಾನ್ ಜೋಸೆಫ್ (₹50 ಸಾವಿರ ), ಆರವ್ ಮಹೇಶ್ (₹50 ಸಾವಿರ), ನಾಥನ್ ಡಿ’ಮೆಲ್ಲೋ (₹50 ಸಾವಿರ), ಸುಹಾಸ್ ಪುರುಷೋತ್ತಮ್ (₹30 ಸಾವಿರ), ಸುಹಾಸ್ ಪುರುಷೋತ್ತಮ್ (₹30ಸಾವಿರ), ಆಶಿಶ್ ಮಹೇಶ್ (₹30 ಸಾವಿರ), ಕುಶ್ ಮರಾಥೆ (₹30 ಸಾವಿರ). ಒಟ್ಟು ಆಟಗಾರರು: 18, ವೆಚ್ಚ:₹59.85 ಲಕ್ಷ, ಉಳಿಕೆ: ₹15 ಸಾವಿರ.
ಮೈಸೂರು ವಾರಿಯರ್ಸ್‌ (Mysore Warriors)
ಚೇತನ್ ಎಲ್ಆರ್ (₹11.50 ಲಕ್ಷ), ಮನೋಜ್ ಭಾಂಡಗೆ (₹10 ಲಕ್ಷ), ವೈಶಾಕ್ ವಿ (₹8.25 ಲಕ್ಷ), ಕಾರ್ತಿಕೇಯ ಕೆಪಿ (₹5 ಲಕ್ಷ), ಮಾಧವ್ ಪ್ರಕಾಶ್ ಬಜಾಜ್ (₹3.20 ಲಕ್ಷ), ಕಾರ್ತಿಕ್ ಎಸ್‌ಯು (₹3 ಲಕ್ಷ), ಲವಿಶ್ ಕೌಶಲ್ (₹3 ಲಕ್ಷ), ಪ್ರಸಿದ್ಧ್ ಕೃಷ್ಣ (₹2.60 ಲಕ್ಷ), ದೇವದತ್ ಪಡಿಕ್ಕಲ್ (₹2.60 ಲಕ್ಷ), ಮೋನಿಶ್ ರೆಡ್ಡಿ (₹2.40 ಲಕ್ಷ), ಅಭಿಷೇಕ್ ಪ್ರಭಾಕರ್ (₹2.00 ಲಕ್ಷ), ರಿತೇಶ್ ಭಟ್ಕಳ್ (₹1.90 ಲಕ್ಷ), ಸಂಜಯ್ ಅಶ್ವಿನ್ ಸಿ (₹50 ಸಾವಿರ), ಅಗಸ್ತ್ಯ ಎಸ್ (₹50 ಸಾವಿರ), ಯುವರಾಜ್ ಅರೋರಾ (₹50 ಸಾವಿರ), ಲಿಖಿತ್ ಎಂ ಬನ್ನೂರ್ (₹50 ಸಾವಿರ), ಜಸ್ಪರ್ ಇಜೆ (₹50 ಸಾವಿರ),ದೀಪಕ್ (₹30 ಸಾವಿರ).ಒಟ್ಟು ಆಟಗಾರರು: 18, ವೆಚ್ಚ:₹58.5 ಲಕ್ಷ, ಉಳಿಕೆ: ₹1.95 ಲಕ್ಷ.
ಹುಬ್ಬಳ್ಳಿ ಟೈಗರ್ಸ್‌ (Hubli Tigers)
ಅಭಿನವ್ ಮನೋಹರ್ (₹13.50 ಲಕ್ಷ), ಮಯಾಂಕ್ ಅಗರ್ವಾಲ್ (₹11.50 ಲಕ್ಷ), ಹಾರ್ದಿಕ್ ರಾಜ್ (₹7.50 ಲಕ್ಷ), ಮನ್ವಂತ್ ಕುಮಾರ್ ಎಲ್ (₹7.50 ಲಕ್ಷ), ಶಿಖರ್ ಶೆಟ್ಟಿ (₹4 ಲಕ್ಷ), ಮೊಹಮದ್ ತಾಹಾ (₹3.20 ಲಕ್ಷ), ಅನೀಶ್ವರ್ ಗೌತಮ್ (₹1 ಲಕ್ಷ), ವೈಭವ್ ಶರ್ಮ (₹1.20 ಲಕ್ಷ), ರಕ್ಷಿತ್ ಎಸ್ (₹1.90 ಲಕ್ಷ). ಕೃತಿಕ್ ಕೃಷ್ಣ (₹1.00 ಲಕ್ಷ), ಕುಮಾರ್ ಎಲ್ಆರ್ (₹95 ಸಾವಿರ), ಆದಿತ್ಯ ಗೋಯಲ್ (₹75 ಸಾವಿರ), ಅಭಿಷೇಕ್ ಅಹ್ಲಾವತ್ (₹50 ಸಾವಿರ), ತನಿಷ್ ಮಹೇಶ್ (₹50 ಸಾವಿರ), ಪ್ರೀತೇಶ್ ಇಂಗಳೆ (₹30 ಸಾವಿರ), ವಿಕಾಸ್ ಗೌಡ (₹30 ಸಾವಿರ), ವಿನಾಯಕ್ ಹೊಳ್ಳ (₹30 ಸಾವಿರ), ರೋನಕ್ (₹30 ಸಾವಿರ). ಒಟ್ಟು ಆಟಗಾರರು: 18, ವೆಚ್ಚ:₹58.40 ಲಕ್ಷ, ಉಳಿಕೆ: ₹1.60 ಲಕ್ಷ.
ಶಿವಮೊಗ್ಗ ಯೋಧಾಸ್ (Shivamogga Yodha)
ಆರ್.ಸ್ಮರಣ್ (₹15.75 ಲಕ್ಷ), ಲವನೀತ್ ಸಿಸೋಡಿಯಾ (₹7.75 ಲಕ್ಷ), ಅಭಿಲಾಷ್ ಶೆಟ್ಟಿ (₹5.75ಲಕ್ಷ), ಯಶ್ ರಾಜ್ ಪೂಂಜಾ (₹5ಲಕ್ಷ), ನವೀನ್ ಎಂಜಿ (₹4.75 ಲಕ್ಷ), ಹರ್ಷಿಲ್ ಧರ್ಮನಿ (₹4ಲಕ್ಷ), ಯಶೋವರ್ಧನ್ ಪರಂತಪ್ (₹3.4 ಲಕ್ಷ), ಪ್ರಜ್ವಲ್ (₹1.90 ಲಕ್ಷ),ಮೊಹ್ಸಿನ್ ಖಾನ್ (₹2 ಲಕ್ಷ), ಆದರ್ಶ್ ಪ್ರಜ್ವಲ್ (₹1.90 ಲಕ್ಷ), ತುಷಾರ್ ಸಿಂಗ್ (₹1.80 ಲಕ್ಷ), ಅನೀಶ್ ಕೆವಿ (₹1.80 ಲಕ್ಷ), ಶ್ರೀಶ ಎಸ್ ಆಚಾರ್ (₹1.00 ಲಕ್ಷ), ಧನುಷ್ ಗೌಡ ಆರ್ (₹50 ಸಾವಿರ), ವಾಸವ್ ವೆಂಕಟೇಶ್ (₹50 ಸಾವಿರ), ಭೀಮಾ ರಾವ್ ನವ್ಲೆ (₹30 ಸಾವಿರ), ಶ್ರೇಯಾಂಕ್ ಸಾಗರ್ (₹30 ಸಾವಿರ), ಯದುಗಿರಿ ಯಾದವ್ (₹30 ಸಾವಿರ), ಶಿವರುದ್ರ (₹30 ಸಾವಿರ). ಒಟ್ಟು ಆಟಗಾರರು:17, ವೆಚ್ಚ:₹57.10 ಲಕ್ಷ, ಉಳಿಕೆ: ₹2.90 ಲಕ್ಷ.
ಕೋಸ್ಟಲ್ ಕಿಂಗ್ಸ್ ಮಂಗಳೂರು (Coastal Kings Mangaluru)
ಕರುಣ್ ನಾಯರ್ (₹18 ಲಕ್ಷ), ಶ್ರೇಯಸ್ ಗೋಪಾಲ್ (₹10.25 ಲಕ್ಷ), ಕೌಶಿಕ್ ವಿ (₹8 ಲಕ್ಷ), ಸೂರಜ್ ಅಹುಜಾ (₹6 ಲಕ್ಷ), ವೆಂಕಟೇಶ್ ಎಂ (₹3.40 ಲಕ್ಷ), ನಿಕಿನ್ ಜೋಸ್ (₹2.40 ಲಕ್ಷ), ಧೀರಜ್ ಗೌಡ (₹2 ಲಕ್ಷ), ಸಂತೋಕ್ ಸಿಂಗ್ (₹1.20 ಲಕ್ಷ), ಕುಶಾಲ್ ವಾಧ್ವನಿ (₹1 ಲಕ್ಷ), ಆದಶ್ ಎಸ್‌ಜೆ (₹95 ಸಾವಿರ), ಅನ್ವಯ್ ದ್ರಾವಿಡ್ (₹90 ಸಾವಿರ), ಕಾರ್ತಿಕ್ ಸಿಎ (₹75 ಸಾವಿರ), ರಾಜ್‌ವಿರ್ ವಾಧ್ವಾ (₹65 ಸಾವಿರ), ಸಿದ್ಧಾರ್ಥ್ ಅಖಿಲ್ (₹50 ಸಾವಿರ), ರಥನ್ ಬಿಆರ್ (₹30 ಸಾವಿರ), ಪೃಥ್ವಿರಾಜ್ ಶೇಖಾವತ್ (₹30 ಸಾವಿರ), ಆರ್ಯ ಜೆ ಗೌಡ (₹30 ಸಾವಿರ), ಆರೋನ್ ಸಿರಿಲ್ ಕ್ರಿಸ್ಟಿ (₹30ಸಾವಿರ). ಒಟ್ಟು ಆಟಗಾರರು: 18, ವೆಚ್ಚ:₹57.20 ಲಕ್ಷ, ಉಳಿಕೆ: ₹2.80 ಲಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net