ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪಂಜಾಬ್ ಪರ ಪ್ರಿಯಾಂಶ್ ಆರ್ಯ (93 ರನ್, 37 ಎಸೆತ, 9 ಸಿಕ್ಸರ್) ಮತ್ತು ಕೂಪರ್ ಕಾನಲಿ (87 ರನ್, 46 ಎಸೆತ, 7 ಸಿಕ್ಸರ್) ಎರಡನೇ ವಿಕೆಟ್‌ಗೆ ಬರೋಬ್ಬರಿ 182 ರನ್‌ಗಳ ದಾಖಲೆಯ ಜೊತೆಯಾಟವಾಡಿದರು. ಲಕ್ನೋ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಆವೇಶ್ ಖಾನ್ ಅವರ ಓವರ್‌ಗಳಲ್ಲಿ ರನ್‌ಗಳ ಮಳೆಯೇ ಹರಿಯಿತು.