ಎಷ್ಟೇ ಪ್ರಯತ್ನಿಸಿದರೂ ಸಿಗದ ವಿರಾಟ್​ ಆಟೋಗ್ರಾಫ್​; ಬ್ಯಾಟ್ ನೆಲಕ್ಕೆ ಕುಕ್ಕಿ, ಅತ್ತ ಪುಟ್ಟ ಅಭಿಮಾನಿ ವಿಡಿಯೋ ವೈರಲ್..Virat Kohli

Virat Kohli
Virat Kohli
Published on

ಪ್ರಮುಖ ಮುಖ್ಯಾಂಶಗಳು

  • ವಿರಾಟ್​​ ಕೊಹ್ಲಿ ಆಟೋಗ್ರಾಫ್​ ಸಿಗದೆ ಅತ್ತ ಪುಟ್ಟ ಬಾಲಕ, ನೆಟ್ಟಿಗರಿಂದ ಬೇಸರ ವ್ಯಕ್ತ
  • ಎಷ್ಟೇ ಮಿಸುಕಾಡಿದರು ನೋಡದೆ ಹೊರಟ ವಿರಾಟ್​​, ನೆಲಕ್ಕೆ ಕುಕ್ಕಿ ಗಳಗಳನೆ ಅತ್ತ ಬಾಲಕ
  • ಪುಟ್ಟ ಅಭಿಮಾನಿ ಅತ್ತ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್
Indian Premier League ಕ್ರೇಜ್​​​​ ಜೋರಾಗಿದೆ. ಅದ್ರಲ್ಲೂ ಧೋನಿ, ವಿರಾಟ್​ ಕೊಹ್ಲಿ ಸೇರಿದಂತೆ ಇಷ್ಟದ ನಾಯಕರ ಸಹಿ ಪಡೆಯೋದಕ್ಕೆ ಜನ ಸೇರಿರುತ್ತಾರೆ. ಆದರೆ, ಹಸ್ತಾಕ್ಷರ ಸಿಗದಿದ್ದಾಗ ಆಗುವ ನೋವು ಅಂತಿದ್ದಲ್ಲ. ಇಂತದ್ದೇ ಒಂದು ಸಂದರ್ಭ ವಿರಾಟ್​ ಕೊಹ್ಲಿಯ(Virat Kohli) ಪುಟ್ಟ ಅಭಿಮಾನಿಗೆ ಸಂಭವಿಸಿತ್ತು. ಆತ  ಬೇಸರವಾಗಿ ಅತ್ತು ಕರೆದು, ಬ್ಯಾಟ್ ನೆಲಕ್ಕೆ ಕುಕ್ಕಿರುವ ವಿಡಿಯೋ ಸದ್ಯ ವೈರಲ್​ ಆಗಿದೆ.
Royal Challengers Bengaluru  ತಂಡದ ಪಂದ್ಯ ಮುಗಿದ ನಂತರವೋ ಅಥವಾ ಅಭ್ಯಾಸದ ಅವಧಿಯಲ್ಲಿಯೋ ನಡೆದ ಘಟನೆ ಇದು ಎನ್ನಲಾಗಿದೆ. ಈಗ ನೆಟ್ಟಿಗರು ಪುಟ್ಟ ಬಾಲಕನ ಬಗ್ಗೆ ಕರುಣೆ ತೋರಿದ್ದಾರೆ. ವಿರಾಟ್ ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ

ವಿಡಿಯೋದಲ್ಲಿ ಏನಿದೆ?

ಏಪ್ರಿಲ್​ 27ರಂದು ಆರ್​ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು.  ಈ ಮಧ್ಯೆ ವಿರಾಟ್​ ಅವರು ಮೈದಾನಿಂದ ಹೊರ ಬರುತ್ತಿರುವ ವೇಳೆಯಲ್ಲಿಯೋ ಅಥವಾ ಒಳಗೆ ಹೋಗುತ್ತಿರುವಾಗಲೋ ಕಿಕ್ಕಿರಿದು ಜನ ಸೇರಿದ್ದರು. ಎಲ್ಲರಿಗೂ ಆಟೋಗ್ರಾಫ್​ ಕೊಟ್ಟು ಮುಂದೆ ಸಾಗಿದ್ದರು. 
ಅದೇ ಸಮಯದಲ್ಲಿ ಒಬ್ಬ  ಪುಟ್ಟ ಬಾಲಕ ಅವನಷ್ಟೇ ಉದ್ದದ ಬ್ಯಾಟ್ ಹಿಡಿದು, ವಿರಾಟ್  ಬಳಿ ಆಟೋಗ್ರಾಫ್​​ಗಾಗಿ ಅತ್ತಿಂದಿಂತ್ತ ಮಿಸುಕಾಡುತ್ತಿದ್ದ. ಆದರೆ,  ಭದ್ರತಾ ಸಿಬ್ಬಂದಿ ಯಾರನ್ನು ಹತ್ತಿರಕ್ಕೂ ಸುಳಿಯಲು ಬಿಡಲಿಲ್ಲ. ಕೊನೆಗೆ ವಿರಾಟ್​​​ ಹೋಟೆಲ್ ರೂಂನೊಳಗೆ ತೆರಳಿ ಬಿಟ್ಟರು. ಹಾಲ್​ನಿಂದಲೇ ಎಕ್ಸಿಟ್​ವರೆಗೂ ಅಳುತ್ತ ಬಂದ ಆತ ತನ್ನ ಪೋಷಕರ ಬಳಿ ಬರುತ್ತಲೇ ಬ್ಯಾಟ್​​ ನೆಲಕ್ಕೆ ಕುಕ್ಕಿ... ಸಿಟ್ಟಿಗೆ ಬ್ಯಾರಿಕೇಡ್​ ಅನ್ನು ತಳ್ಳಲು ಯತ್ನಿಸಿರುವ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ​ ‘
ಈ ವಿಡಿಯೋ ಕಂಡ ನೆಟ್ಟಿಗರು ವಿರಾಟ್​ ಕೊಹ್ಲಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಆದರೆ, ಇದರಲ್ಲಿ ವಿರಾಟ್​ ನೋಡಿಯೂ ಹಾಗೆ ವರ್ತಿಸಿದ್ದಾರೋ ಅಥವಾ ಇಲ್ಲವೋ ಎನ್ನುವುದು ತಿಳಿದುಬಂದಿಲ್ಲ.

 ನೆಟ್ಟಿಗರು ಹೇಳೋದೇನು?

ಆ ಮಗುವತ್ತ ಒಮ್ಮೆಯಾದರೂ ವಿರಾಟ್​ ಕಣ್ಣು ಹಾಯಿಸಬೇಕಿತ್ತು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಹೀಗೆಂದು ಕಾಮೆಂಟ್ ಮಾಡಿದ್ದಾರೆ. ಹೋಗುತ್ತಾ ಬರುವವರೆಲ್ಲರಿಗೂ ಆಟೋಗ್ರಾಫ್​ ಕೊಡಲು ವಿರಾಟ್​ಗೆ ಸಾಧ್ಯವಿಲ್ಲ ಎಂದು ಪರವಾಗಿ ವಾದಿಸಿದ್ದಾರೆ. ಆಟಗಾರರ ತಪ್ಪಿಲ್ಲ ಭದ್ರತಾ ಸಿಬ್ಬಂದಿ ಬಿಡೋದಿಲ್ಲ ಎಂದು ಕೆಲವೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ವಿರಾಟ್​​ ಕೊಹ್ಲಿ ಮೇಲಿನ ಅಭಿಮಾನ ಆ ಪುಟ್ಟ ಬಾಲಕನಿಗೆ ಎಷ್ಟಿದೆ ಎನ್ನುವುದು ಇಲ್ಲಿ ಸಾಬೀತಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net