ಇನ್ನು ಜಾಗತಿಕ ಪ್ರಾತಿನಿಧ್ಯಕ್ಕಾಗಿ ಐಒಸಿ (IOC) ವಿಧಿಸಿರುವ ನಿಯಮದ ಪ್ರಕಾರ ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಓಷಿಯಾನಿಯಾ ಖಂಡಗಳಿಂದ ಕೇವಲ ತಲಾ ಒಂದು ಅಗ್ರ ರ‍್ಯಾಂಕಿಂಗ್ ತಂಡಕ್ಕೆ ಮಾತ್ರ ನೇರ ಪ್ರವೇಶ ಸಿಗಲಿದೆ. ಸದ್ಯದ ಸಮೀಕರಣದಂತೆ ಏಷ್ಯಾದಿಂದ ಭಾರತ (ರ‍್ಯಾಂಕ್ 1), ಯುರೋಪ್‌ನಿಂದ ಇಂಗ್ಲೆಂಡ್ (ರ‍್ಯಾಂಕ್ 2), ಓಷಿಯಾನಿಯಾದಿಂದ ಆಸ್ಟ್ರೇಲಿಯಾ (ರ‍್ಯಾಂಕ್ 3) ಮತ್ತು ಆಫ್ರಿಕಾದಿಂದ ದಕ್ಷಿಣ ಆಫ್ರಿಕಾ (ರ‍್ಯಾಂಕ್ 5) ಸುಲಭವಾಗಿ ಅರ್ಹತೆ ಪಡೆಯುವ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ, ಆದರೆ ಏಷ್ಯಾ ಖಂಡದಿಂದ ನಂಬರ್ 1 ಸ್ಥಾನದಲ್ಲಿರುವ ಭಾರತ ನೇರ ಅರ್ಹತೆ ಪಡೆಯುವುದರಿಂದ, ಅದೇ ಖಂಡದ ಮತ್ತೊಂದು ತಂಡವಾದ ಪಾಕಿಸ್ತಾನ (ರ‍್ಯಾಂಕ್ 6) ರೇಸ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ.