2026-27ರ ಕ್ರಿಕೆಟ್​ ಋತುವಿಗೆ ಆಯ್ಕೆ ಸಮಿತಿ ನೇಮಿಸಿದ ಕೆಎಸ್​ಸಿಎ

2026-27ರ ಕ್ರಿಕೆಟ್​ ಋತುವಿಗೆ ಆಯ್ಕೆ ಸಮಿತಿ ನೇಮಿಸಿದ ಕೆಎಸ್​ಸಿಎ
2026-27ರ ಕ್ರಿಕೆಟ್​ ಋತುವಿಗೆ ಆಯ್ಕೆ ಸಮಿತಿ ನೇಮಿಸಿದ ಕೆಎಸ್​ಸಿಎ
Published on
ಬೆಂಗಳೂರು: ಮಾಜಿ ಕ್ರಿಕೆಟಿಗರಾದ ಅನಿಲ್​ ಕುಂಬ್ಳೆ, ಜಾವಗಲ್​ ಶ್ರೀನಾಥ್​, ಸುನೀಲ್​ ಜೋಶಿ ಮತ್ತು ಜಯಶ್ರೀ ದೊರೆಸ್ವಾಮಿ ಒಳಗೊಂಡ ಕ್ರಿಕೆಟ್​ ಸಲಹಾ ಸಮಿತಿಯು 2026-27ರ ಸಾಲಿನ ಕ್ರಿಕೆಟ್​ ಋತುವಿಗೆ ಆಯ್ಕೆ ಸಮಿತಿಗಳನ್ನು ಶಿಫಾರಸು ಮಾಡಿದ್ದು, ಇದನ್ನು ವೆಂಕಟೇಶ್​ ಪ್ರಸಾದ್​ ಸಾರಥ್ಯದ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (KSCA) ಮಂಗಳವಾರ ಅಂಗೀಕರಿಸಿದೆ.

ಸೀನಿಯರ್​ ಮತ್ತು 23 ವಯೋಮಿತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಮಿತ್​ ವರ್ಮ ಮುಂದುವರಿಯಲಿದ್ದಾರೆ. ತೇಜ್​ಪಾಲ್​ ಕೊಠಾರಿ, ಸುನೀಲ್​ ರಾಜು, ಸುರೇಶ್​ ಶಾನ್​ಬಲ್​ ಇತರ ಸದಸ್ಯರು. 19 ವಯೋಮಿತಿ ಆಯ್ಕೆ ಸಮಿತಿಗೆ ಎಸ್​. ಪ್ರಕಾಶ್​, 16-14 ವಯೋಮಿತಿ ಆಯ್ಕೆ ಸಮಿತಿಗೆ ಉಮೇಶ್​ ಜಿಎನ್​ ಅಧ್ಯಕ್ಷರಾಗಿದ್ದಾರೆ.

ಮಹಿಳೆಯರ ಸೀನಿಯರ್​ ಮತ್ತು 23 ವಯೋಮಿತಿ ಆಯ್ಕೆ ಸಮಿತಿಗೆ ಗಾಯತ್ರಿ ಕೆ.ಆರ್​. ಅಧ್ಯೆಯಾಗಿದ್ದಾರೆ. ಮಹಿಳೆಯರ 19 ಮತ್ತು 15 ವಯೋಮಿತಿ ಆಯ್ಕೆ ಸಮಿತಿಯನ್ನು ಮಾಲಾ ಸುಂದರೇಶನ್​ ಮುನ್ನಡೆಸಲಿದ್ದಾರೆ. 2026-27ರ ದೇಶೀಯ ಕ್ರಿಕೆಟ್​ ಋತು ಆಗಸ್ಟ್​ 23ಕ್ಕೆ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net