ಕೃನಾಲ್​​ಗೆ ಐದನೇ ಕಪ್​; ಪಾಂಡ್ಯ ಸಹೋದರರಿಗೆ 10ನೇ ಐಪಿಎಲ್​ ಟ್ರೋಫಿ ಸಂಭ್ರಮ!

ಕೃನಾಲ್​​ಗೆ ಐದನೇ ಕಪ್​; ಪಾಂಡ್ಯ ಸಹೋದರರಿಗೆ 10ನೇ ಐಪಿಎಲ್​ ಟ್ರೋಫಿ ಸಂಭ್ರಮ!
ಕೃನಾಲ್​​ಗೆ ಐದನೇ ಕಪ್​; ಪಾಂಡ್ಯ ಸಹೋದರರಿಗೆ 10ನೇ ಐಪಿಎಲ್​ ಟ್ರೋಫಿ ಸಂಭ್ರಮ!
Published on
ಬೆಂಗಳೂರು: ಆರ್​ಸಿಬಿ (RCB) ಆಲ್ರೌಂಡರ್​ ಕೃನಾಲ್​ ಪಾಂಡ್ಯ ಐಪಿಎಲ್​ನಲ್ಲಿ (IPL) 5 ಟ್ರೋಫಿ ಗೆದ್ದ ಸಾಧನೆ ಮಾಡಿದರು. ಈ ಮೂಲಕ ಅವರು ತಲಾ 5 ಬಾರಿ ಗೆದ್ದ ಎಂಎಸ್​ ಧೋನಿ, ಹಾರ್ದಿಕ್​ ಪಾಂಡ್ಯ, ಕೈರಾನ್​ ಪೊಲ್ಲಾರ್ಡ್​ ಸಾಧನೆ ಸರಿಗಟ್ಟಿದರು. 2017, 2019, 2020ರಲ್ಲಿ ಮುಂಬೈ ಪರ ಟ್ರೋಫಿ ಗೆದ್ದಿದ್ದ ಕೃನಾಲ್​, ಕಳೆದ ವರ್ಷ ಆರ್​ಸಿಬಿ ಪರ ಈ ಸಾಧನೆ ಮಾಡಿದ್ದರು. ರೋಹಿತ್​ ಶರ್ಮ (1 ಡೆಕ್ಕನ್​ ಚಾರ್ಜರ್ಸ್​, 5 ಮುಂಬೈ) ಮತ್ತು ಅಂಬಟಿ ರಾಯುಡು (3 ಮುಂಬೈ, 3 ಸಿಎಸ್​ಕೆ) ತಲಾ 6 ಬಾರಿ ಐಪಿಎಲ್​ ಟ್ರೋಫಿ ಗೆದ್ದಿರುವುದು ದಾಖಲೆಯಾಗಿದೆ.

ಹಾರ್ದಿಕ್​ ಪಾಂಡ್ಯ ಮತ್ತು ಕೃನಾಲ್​ ಪಾಂಡ್ಯ ಸಹೋದರರು ಐಪಿಎಲ್​ನಲ್ಲಿ ಆಡಿದ 12 ವರ್ಷಗಳಲ್ಲಿ ಒಟ್ಟು 10 ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿದ್ದಾರೆ. ಹಾರ್ದಿಕ್​ ಪಾಂಡ್ಯ ಕೂಡ ಈಗಾಗಲೆ 5 ಬಾರಿ ಐಪಿಎಲ್​ ಟ್ರೋಫಿ ಗೆದ್ದಿದ್ದಾರೆ. 2015, 2017, 2019, 2020ರಲ್ಲಿ ಮುಂಬೈ ಪರ ಮತ್ತು 2022ರಲ್ಲಿ ಗುಜರಾತ್​ ಟೈಟಾನ್ಸ್​ ಪರ ಅವರು ಈ ಸಾಧನೆ ಮಾಡಿದ್ದರು. ಕೃನಾಲ್​ ಆಡಿದ ಎಲ್ಲ 5 ಐಪಿಎಲ್​ನಲ್ಲಿ ಗೆದ್ದ ಅಜೇಯ ದಾಖಲೆ ಹೊಂದಿದ್ದರೆ, ಹಾರ್ದಿಕ್​ ಪಾಂಡ್ಯ 2023ರ ಫೈನಲ್​ನಲ್ಲಿ ಸೋತಿದ್ದರು.

ಸಾಲ್ಟ್​, ಸುಯಶ್​ಗೆ ಹ್ಯಾಟ್ರಿಕ್​ ಕಪ್​!
ಫಿಲ್​ ಸಾಲ್ಟ್​ ಮತ್ತು ಸುಯಶ್​ ಶರ್ಮ ಐಪಿಎಲ್​ನಲ್ಲಿ ಹ್ಯಾಟ್ರಿಕ್​ ಪ್ರಶಸ್ತಿ ಸಾಧನೆ ಮಾಡಿದರು. ಕಳೆದ 2 ವರ್ಷಗಳಿಂದ ಆರ್​ಸಿಬಿ ಭಾಗವಾಗಿರುವ ಇವರಿಬ್ಬರು, 2024ರಲ್ಲಿ ಪ್ರಶಸ್ತಿ ಗೆದ್ದ ಕೆಕೆಆರ್​ ತಂಡದ ಭಾಗವಾಗಿದ್ದರು. ಈ ಮುನ್ನ ಕರ್ಣ್​ ಶರ್ಮ ಐಪಿಎಲ್​ನಲ್ಲಿ ಹ್ಯಾಟ್ರಿಕ್​ ಟ್ರೋಫಿ ಗೆದ್ದ ಮೊದಲಿಗರೆನಿಸಿದ್ದರು. ಅವರು 2016ರಲ್ಲಿ ಸನ್​ರೈಸರ್ಸ್​, 2017ರಲ್ಲಿ ಮುಂಬೈ, 2018ರಲ್ಲಿ ಸಿಎಸ್​ಕೆ ಪರ ಟ್ರೋಫಿ ಗೆದ್ದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net