ಐಪಿಎಲ್ನಲ್ಲಿ 9 ಸಾವಿರ ರನ್ ಸಿಡಿಸಿ ಕೊಹ್ಲಿ; ಆರ್ಸಿಬಿ ಹಲವು ದಾಖಲೆ!
ಐಪಿಎಲ್ನಲ್ಲಿ 9 ಸಾವಿರ ರನ್ ಸಿಡಿಸಿ ಕೊಹ್ಲಿ; ಆರ್ಸಿಬಿ ಹಲವು ದಾಖಲೆ!
Published on:
Copied
Follow Us
ನವದೆಹಲಿ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 19ನೇ ಆವೃತ್ತಿಯಲ್ಲಿ ಆರನೇ ಗೆಲುವು ಸಾಧಿಸಿ ಪ್ಲೇಆಫ್ ಸನಿಹ ತಲುಪಿದೆ. ಮೊದಲ 4 ಓವರ್ಗಳಲ್ಲೇ 6 ವಿಕೆಟ್ ಕಬಳಿಸಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಕ್ಕಾಬಿಕ್ಕಿಯಾಗಿಸಿದ ಆರ್ಸಿಬಿ ತಂಡ 9 ವಿಕೆಟ್ಗಳ ಪ್ರಚಂಡ ಗೆಲುವು ಸಾಧಿಸಿದೆ. ಈ ಮೂಲಕ ರಜತ್ ಪಾಟೀದಾರ್ ಪಡೆ ಬೆಂಗಳೂರಿನಲ್ಲಿ ಡೆಲ್ಲಿ ಎದುರು ಅನುಭವಿಸಿದ್ದ ಸೋಲಿಗೂ ಭರ್ಜರಿಯಾಗಿ ಸೇಡು ತೀರಿಸಿಕೊಂಡಿದೆ.
ವಿರಾಟ್ ಕೊಹ್ಲಿ (Virat Kohli) 9 ಸಾವಿರ ರನ್
ವಿರಾಟ್ ಕೊಹ್ಲಿ (9,012) 11 ರನ್ ಗಳಿಸಿದ ವೇಳೆ ಐಪಿಎಲ್ನಲ್ಲಿ 9 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆದರು. ರೋಹಿತ್ ಶರ್ಮ 7,183 ರನ್ ಗಳಿಸಿರುವುದು ನಂತರದ ಗರಿಷ್ಠ.
2ನೇ ವೇಗದ ಚೇಸಿಂಗ್
ಆರ್ಸಿಬಿ 6.3 ಓವರ್ನಲ್ಲೇ ಗೆಲ್ಲುವ ಮೂಲಕ ಐಪಿಎಲ್ನಲ್ಲಿ 2ನೇ ವೇಗದ ಚೇಸಿಂಗ್ ಸಾಧನೆ ಮಾಡಿತು. 2008ರಲ್ಲಿ ಕೆಕೆಆರ್ ಎದುರು ಮುಂಬೈ 5.3 ಓವರ್ಗಳಲ್ಲೇ 68 ರನ್ ಚೇಸ್ ಮಾಡಿ ಗೆದ್ದಿರುವುದು ದಾಖಲೆ.
7: ಆರ್ಸಿಬಿ ತಂಡ ಐಪಿಎಲ್ನಲ್ಲಿ ಮೊದಲ 5 ವಿಕೆಟ್ಗಳನ್ನು ಕನಿಷ್ಠ ಸ್ಕೋರ್ಗೆ (7) ಕಬಳಿಸಿದ ತಂಡ ಎನಿಸಿತು. 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಕೊಚ್ಚಿ 6 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಕನಿಷ್ಠ.
75: ಇದು ಡೆಲ್ಲಿ ತಂಡದ 3ನೇ ಕನಿಷ್ಠ ಮೊತ್ತವಾಗಿದೆ. 2017ರಲ್ಲಿ ಮುಂಬೈ ಎದುರು 66 ಮತ್ತು ಪಂಜಾಬ್ ಎದುರು 67 ರನ್ ಗಳಿಸಿದ್ದು ಮೊದಲೆರಡು ಕನಿಷ್ಠ ಮೊತ್ತ.
3: ಆರ್ಸಿಬಿ ಎದುರು ತಂಡವೊಂದರ 3ನೇ ಕನಿಷ್ಠ ಮೊತ್ತ ಇದಾಗಿದೆ. ರಾಜಸ್ಥಾನ ರಾಯಲ್ಸ್ 2009ರಲ್ಲಿ 58 ಮತ್ತು 2023ರಲ್ಲಿ 59 ರನ್ ಗಳಿಸಿದ್ದು ಮೊದಲ 2 ಕನಿಷ್ಠ ಮೊತ್ತ.
10: ಇದು ಐಪಿಎಲ್ನಲ್ಲಿ 10ನೇ ಕನಿಷ್ಠ ಮೊತ್ತವಾಗಿದೆ. ಆರ್ಸಿಬಿ 2017ರಲ್ಲಿ ಕೆಕೆಆರ್ ಎದುರು 49 ರನ್ಗೆ ಆಲೌಟ್ ಆಗಿದ್ದು ಕನಿಷ್ಠವೆನಿಸಿದೆ.
3: ಒಂದೇ ಐಪಿಎಲ್ ಇನಿಂಗ್ಸ್ನಲ್ಲಿ ಇಬ್ಬರು ಬೌಲರ್ಗಳು (ಭುವಿ-ಹ್ಯಾಸಲ್ವುಡ್) ಪವರ್ಪ್ಲೇನಲ್ಲೇ ತಲಾ 3 ವಿಕೆಟ್ ಪಡೆದ ಮೊದಲ ದೃಷ್ಟಾಂತ ಇದಾಗಿದೆ.
ಪವರ್ಪ್ಲೇನಲ್ಲಿ ಕನಿಷ್ಠ ಗಳಿಕೆ!
ಡೆಲ್ಲಿ ತಂಡ ಐಪಿಎಲ್ ಇತಿಹಾಸದಲ್ಲೇ ಪವರ್ಪ್ಲೇನಲ್ಲಿ ಅತ್ಯಂತ ಕನಿಷ್ಠ (6 ವಿಕೆಟ್ಗೆ 13) ರನ್ ಗಳಿಸಿದ ತಂಡವೆನಿಸಿತು. 2009ರಲ್ಲಿ ಆರ್ಸಿಬಿ ಎದುರು ರಾಜಸ್ಥಾನ 2 ವಿಕೆಟ್ಗೆ 14 ರನ್ ಮತ್ತು 2022ರಲ್ಲಿ ರಾಜಸ್ಥಾನ ಎದುರು ಸನ್ರೈಸರ್ಸ್ 3 ವಿಕೆಟ್ಗೆ 14 ರನ್ ಗಳಿಸಿದ್ದು ಹಿಂದಿನ ಕನಿಷ್ಠ. ಪವರ್ಪ್ಲೇನಲ್ಲೇ 6 ವಿಕೆಟ್ ಬಿದ್ದ 2ನೇ ದೃಷ್ಟಾಂತ ಇದಾಗಿದೆ. 2011ರಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಕೊಚ್ಚಿ ಟಸ್ಕರ್ಸ್ ತಂಡವೂ 29 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು.