ಗಾಲೆ ಟೆಸ್ಟ್​ ಪಂದ್ಯದ ವೇಳೆ ದೇವದತ್​ ಪಡಿಕ್ಕಲ್​ರನ್ನು ಅಪ್ಪಿಕೊಂಡು ಧನ್ಯವಾದ ಹೇಳಿದ ಕೆಎಲ್​ ರಾಹುಲ್! ಹೀಗಿದೆ ಕಾರಣ...

ಗಾಲೆ ಟೆಸ್ಟ್​ ಪಂದ್ಯದಲ್ಲಿ ದೇವದತ್​ ಪಡಿಕ್ಕಲ್​ರನ್ನು ಅಪ್ಪಿ ಮುದ್ದಾಡಿದ ಕೆಎಲ್​ ರಾಹುಲ್! ಹೀಗಿದೆ ಕಾರಣ...
ಗಾಲೆ ಟೆಸ್ಟ್​ ಪಂದ್ಯದಲ್ಲಿ ದೇವದತ್​ ಪಡಿಕ್ಕಲ್​ರನ್ನು ಅಪ್ಪಿ ಮುದ್ದಾಡಿದ ಕೆಎಲ್​ ರಾಹುಲ್! ಹೀಗಿದೆ ಕಾರಣ...
Published on

ಕರ್ನಾಟಕದ ಕ್ರಿಕೆಟಿಗರಾದ ಕೆಎಲ್​ ರಾಹುಲ್​ (

KL Rahul

) ಮತ್ತು ದೇವದತ್​ ಪಡಿಕ್ಕಲ್ (

Devdutt Padikkal

)​ ಅನುಬಂಧಕ್ಕೆ ಗಾಲೆ ಮೈದಾನ ಮಂಗಳವಾರ ಸಾಕ್ಷಿಯಾಯಿತು. 2ನೇ ಇನಿಂಗ್ಸ್​ನ 11ನೇ ಓವರ್​ನಲ್ಲಿ ರಾಹುಲ್​ ವಿರುದ್ಧ ಬೌಲರ್​ ಪ್ರಭಾತ್​ ಜಯಸೂರ್ಯ ಎಲ್​ಬಿ ಮನವಿ ಸಲ್ಲಿಸಿದಾಗ ಅಂಪೈರ್​ ಅದನ್ನು ಪುರಸ್ಕರಿಸಿದರು. ಆಗ ಪೆವಿಲಿಯನ್​ನತ್ತ ಹೆಜ್ಜೆ ಹಾಕುತ್ತಿದ್ದ ರಾಹುಲ್​ರನ್ನು ತಡೆದು ಪಡಿಕ್ಕಲ್​, ಡಿಆರ್​ಎಸ್​ಗೆ ಮೊರೆ ಹೋಗುವಂತೆ ಸೂಚಿಸಿದರು. ಇದರಂತೆ ರಾಹುಲ್​ ಡಿಆರ್​ಎಸ್​ ಮನವಿ ಸಲ್ಲಿಸಿದಾಗ, ಬಾಲ್​ ಟ್ರ್ಯಾಕರ್​ನಲ್ಲಿ ಚೆಂಡು ವಿಕೆಟ್​ನಿಂದ ಹೊರಹೋಗುತ್ತಿದ್ದುದು ಸ್ಪಷ್ಟವಾಗಿದ್ದರಿಂದ ತೃತೀಯ ಅಂಪೈರ್​ "ನಾಟೌಟ್​' ನೀಡಿದರು.


ಆಗ ರಾಹುಲ್​, ಪಡಿಕ್ಕಲ್​ರನ್ನು ಅಪ್ಪಿಕೊಂಡು ಧನ್ಯವಾದ ಹೇಳುವ ಮೂಲಕ ಸಂಭ್ರಮಿಸಿದರು. ಆದರೆ ಆಗ 25 ರನ್​ ಗಳಿಸಿದ್ದ ರಾಹುಲ್​ ಬಳಿಕ ಹೆಚ್ಚಿನ ಲಾಭ ಪಡೆಯದೆ, 3 ಓವರ್​ಗಳ ಬಳಿಕ 35 ರನ್​ಗಳಿಗೆ ಔಟಾದರು.

ರಾಹುಲ್​-ಪಡಿಕ್ಕಲ್​ ಲಂಕಾ ನೆಲದ ಟೆಸ್ಟ್​ನಲ್ಲಿ ಎರಡೂ ಇನಿಂಗ್ಸ್​ಗಳಲ್ಲಿ 50 ಪ್ಲಸ್​ ರನ್​ ಜತೆಯಾಟವಾಡಿದ 4ನೇ ಭಾರತೀಯ ಜೋಡಿ ಎನಿಸಿದರು. ಎಸ್​. ರಮೇಶ್​-ಎಸ್​ಎಸ್​ ದಾಸ್​, ಸೆಹ್ವಾಗ್​-ಗಂಭೀರ್​, ಲಕ್ಷ್ಮಣ್​-ರೈನಾ ಹಿಂದಿನ ಸಾಧಕರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net