ಕನ್ನಡಿಗ ಕೆಎಲ್​ ರಾಹುಲ್ ಭಾರತ​ ಟಿ20 ತಂಡಕ್ಕೆ ಮರಳಲಿ; ಮಾಜಿ ಕ್ರಿಕೆಟಿಗ ಆಗ್ರಹ!

ಕನ್ನಡಿಗ ಕೆಎಲ್​ ರಾಹುಲ್ ಭಾರತ​ ಟಿ20 ತಂಡಕ್ಕೆ ಮರಳಲಿ; ಮಾಜಿ ಕ್ರಿಕೆಟಿಗ ಆಗ್ರಹ!
ಕನ್ನಡಿಗ ಕೆಎಲ್​ ರಾಹುಲ್ ಭಾರತ​ ಟಿ20 ತಂಡಕ್ಕೆ ಮರಳಲಿ; ಮಾಜಿ ಕ್ರಿಕೆಟಿಗ ಆಗ್ರಹ!
Published on
ನವದೆಹಲಿ: ಭಾರತ ತಂಡ ಯುಕೆ ಪ್ರವಾಸದಲ್ಲಿ ಗೆಲುವು ಕಾಣದೆ ತತ್ತರಿಸಿರುವುದರಿಂದ ಕನ್ನಡಿಗ ಕೆಎಲ್​ ರಾಹುಲ್​ (kl rahul) ಟಿ20 ತಂಡಕ್ಕೆ ಮರಳಲು ಇದು ಸರಿಯಾದ ಸಮಯವಾಗಿದೆ ಎಂದು ಮಾಜಿ ಆರಂಭಿಕ ಎಸ್​. ರಮೇಶ್​ ಅಭಿಪ್ರಾಯಪಟ್ಟಿದ್ದಾರೆ.

ಕೆಎಲ್​ ರಾಹುಲ್​ 2022ರ ನಂತರ ಭಾರತ ಪರ ಟಿ20 ಪಂದ್ಯ ಆಡಿಲ್ಲ. ಆದರೆ ಮುಂದಿನ ಟಿ20 ವಿಶ್ವಕಪ್​ ಟೂರ್ನಿ ಆಸ್ಟ್ರೆಲಿಯಾ&ನ್ಯೂಜಿಲೆಂಡ್​ನ ಸವಾಲಿನ ಪಿಚ್​ನಲ್ಲಿ ನಡೆಯಲಿದೆ. ಹೀಗಾಗಿ ಭಾರತ ತಂಡ ವಿಶ್ವದರ್ಜೆಯ ವೇಗಿಗಳ ಎದುರು ಸಮರ್ಥವಾಗಿ ಆಡಬಲ್ಲ ಬ್ಯಾಟರ್​ಗಳನ್ನು ಹೊಂದಬೇಕಾಗಿದೆ. ಕೆಎಲ್​ ರಾಹುಲ್​ ಈ ರೀತಿಯ ಬ್ಯಾಟರ್​ ಆಗಿದ್ದಾರೆ. ಕಳೆದ ಐಪಿಎಲ್​ನಲ್ಲಿ ಅವರು ಸ್ಟ್ರೆಕ್​ರೇಟ್​ ಟೀಕೆಗಳಿಗೆ ಉತ್ತರ ನೀಡಿದ್ದಾರೆ ಮತ್ತು 150 ಪ್ಲಸ್​ ರನ್​ ಬಾರಿಸಿದ ಮೊದಲ ಭಾರತೀಯರೆನಿಸಿದ್ದಾರೆ. ಆಸೀಸ್​ ಪಿಚ್​ನಲ್ಲಿ ಆರ್ಚರ್​ರಂಥ ವೇಗಿಯನ್ನು ಎದುರಿಸಬಲ್ಲ ರಾಹುಲ್​ರಂಥ ಬ್ಯಾಟರ್​ ಭಾರತ ತಂಡಕ್ಕೆ ಬೇಕಾಗಿದ್ದಾರೆ ಎಂದು ರಮೇಶ್​ ತಿಳಿಸಿದ್ದಾರೆ.

ರಾಹುಲ್​ ಭಾರತ ಪರ 72 ಟಿ20 ಪಂದ್ಯ ಆಡಿದ್ದು, 2 ಶತಕ, 22 ಅರ್ಧಶತಕಗಳ ಸಹಿತ 2,265 ರನ್​ ಬಾರಿಸಿದ್ದಾರೆ. 2022ರ ಟಿ20 ವಿಶ್ವಕಪ್​ಗೆ ಉಪನಾಯಕರಾಗಿದ್ದ ಅವರು, ಸೆಮೀಸ್​ನಲ್ಲಿ ಹೊರಬಿದ್ದ ಬಳಿಕ ಭಾರತ ಚುಟುಕು ಕ್ರಿಕೆಟ್​ ತಂಡಕ್ಕೆ ಮರಳಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net