ಕೆಎಲ್ ರಾಹುಲ್‌ಗೆ, ದೇವದತ್ ಪಡಿಕ್ಕಲ್ ಜೀವದಾನ; ಭಾವುಕರಾಗಿ ಮುತ್ತಿಟ್ಟ ಕನ್ನಡಿಗ! ವಿಡಿಯೋ ವೈರಲ್| KL Rahul and Devdutt Padikkal

ದೇವದತ್​ ಪಡಿಕ್ಕಲ್​ ಸಲಹೆಯಂತೆ ಡಿಆರ್​ಎಸ್​ ಪಡೆದು ಜೀವದಾನ ಪಡೆದ ರಾಹುಲ್​
ದೇವದತ್​ ಪಡಿಕ್ಕಲ್​ ಸಲಹೆಯಂತೆ ಡಿಆರ್​ಎಸ್​ ಪಡೆದು ಜೀವದಾನ ಪಡೆದ ರಾಹುಲ್​
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಪಂದ್ಯ
  • 11 ನೇ ಓವರ್​ನಲ್ಲಿ ಎಲ್ಬಿಡಬ್ಲ್ಯೂಗೆ ಔಟ್​ ಆಗಿದ್ದ ಕೆ.ಎಲ್​. ರಾಹುಲ್​​
  • ದೇವದತ್​ ಪಡಿಕ್ಕಲ್​ ಸಲಹೆಯಂತೆ ಡಿಆರ್​ಎಸ್​ ಪಡೆದು ಜೀವದಾನ ಪಡೆದ ರಾಹುಲ್​
  • ನಾಟ್​ಔಟ್​ ಆಗುತ್ತಿದ್ದಂತೆ ಪಡಿಕ್ಕಲ್​ನನ್ನು ಬಿಗಿದಪ್ಪಿ ಮುತ್ತಿಡಲು ಮುಂದಾದ ಕನ್ನಡಿಗ
ಕೊಲಂಬೊ: ಟಿ-20 ಹಾಗೂ ಏಕದಿನ ಪಂದ್ಯಗಳ ನಂತರ ಟೀಂ ಇಂಡಿಯಾ ಈಗ ಶ್ವೇತ ವರ್ಣದ ಜೆರ್ಸಿ ಧರಿಸಿ, ಟೆಸ್ಟ್​​​ ಕ್ರಿಕೆಟ್​​ಗೆ ಮರಳಿದೆ. ಸದ್ಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯವೊಂದರಲ್ಲಿ ಅವಿಸ್ಮರಣೀಯ ಘಟನೆಯೊಂದು ಸೆರೆಯಾಗಿದೆ.
ಪಂದ್ಯದ ನಾಲ್ಕನೇ ದಿನ ಬ್ಯಾಟಿಂಗ್​ ಮಾಡುತ್ತಿದ್ದ ಭಾರತ ತಂಡದ ಕೆ.ಎಲ್. ರಾಹುಲ್​ ಹಾಗೂ ದೇವದತ್​ ಪಡಿಕ್ಕಲ್ (KL Rahul and Devdutt Padikkal)​ ನಡುವೆ ನಡೆದಿರುವ ಈ ಘಟನೆ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ಡಿಆರ್​ಎಸ್​ ತೆಗೆದುಕೊಳ್ಳಲು ಒತ್ತಾಯ

ಪಂದ್ಯದ 11 ನೇ ಓವರ್​ನಲ್ಲಿ, ಜಯಸೂರ್ಯ ಎಸೆದ ಚೆಂಡು ರಾಹುಲ್​ ಅವರ ಬ್ಯಾಟಿನ ಬದಲು ಪ್ಯಾಡೆಗೆ ತಗುಲಿತು, ತಕ್ಷಣ ಲಂಕಾ ಆಟಗಾರರು ಅಪೀಲ್​ ಮಾಡಿದ ಕೂಡಲೇ ಅಂಪೈಯರ್​ ಔಟ್​ ಎಂದು ತಿಳಿಸಿದರು.

ರಾಹುಲ್​ ಕೂಡ ಈ ನಿರ್ಣಯವನ್ನು ಒಪ್ಪಿಕೊಂಡು ಪೆವಿಲಿಯನತ್ತ ಹೆಜ್ಜೆ ಹಾಕಲು ಮುಂದಾದಾಗ, ನಾನ್​ ಸ್ಟ್ರೈಕರ್​ ಎಂಡ್​ನಲ್ಲಿದ್ದ ದೇವದತ್​ ಪಡಿಕ್ಕಲ್​, ರಾಹುಲ್​ಗೆ ಡಿಆರ್​​ಎಸ್​ ತೆಗೆದಯಕೊಳ್ಳಲು ಒತ್ತಾಯಿಸಿದ್ದಾರೆ. ಮೊದಲು ಇದಕ್ಕೆ ಸಮ್ಮತಿ ನೀಡದ ರಾಹುಲ್​ ಕೊನೆಗೆ, ಡಿಆರ್​ಎಸ್​ ತೆಗೆದುಕೊಂಡಿದ್ದಾರೆ.


ಪಡಿಕ್ಕಲ್​ಗೆ ರಾಹುಲ್​ ಚುಂಬನ!

ಡಿಆರ್​​ಎಸ್​ ತೆಗೆದುಕೊಂಡ ಬಳಿಕ ಮೂರನೇ ಅಂಪೈಯರ್​​ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಚೆಂಡು ಔಟ್​ ಸೈಡ್​ದ ಆಫ್​ ಸ್ಟಂಪ್​​ ಬಿದ್ದಿರುವುದು ತಿಳಿದಿದೆ. ಹೀಗಾಗಿ ಫೀಲ್ಡ್​ ಅಂಪೈರ್​ ಅವರ ನಿರ್ಧಾರವನ್ನು ಬದಲಿಸಿ ನಾಟ್​​ಔಟ್​ ಎಂದು ಘೋಷಿಸಿದ್ದಾರೆ. ಇದನ್ನು ನೋಡಿ ಭಾವುಕರಾದ ಕೆ.ಎಲ್​​​. ರಾಹುಲ್​ ತಮ್ಮ ವಿಕೆಟ್​ ಅನ್ನು ಉಳಿಸಿದ ದೇವದತ್​ ಪಡಿಕ್ಕಲ್​​​ರನ್ನು ಗಟ್ಟಿಯಾಗಿ ಬಿಗಿದಪ್ಪಿಮುತ್ತು ನೀಡಲು ಮುಂದಾಗಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚನಲಕ್ಕೆ ಸಾಕ್ಷಿಯಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net