ಇನ್ನೂ ಪಂದ್ಯ ವಿಚಾರಕ್ಕೆ ಬರುವುದಾದರೆ, ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ ನಾಯಕ ಶುಭಮಾನ್ ಗಿಲ್ ಮತ್ತು ಹಿರಿಯ ಬ್ಯಾಟರ್ ಕೆ.ಎಲ್. ರಾಹುಲ್ ಅವರ ಆಕರ್ಷಕ ಶತಕಗಳ ನೆರವಿನಿಂದ 564/8 ರನ್ಗಳ ಬೃಹತ್ ಮೊತ್ತ ಪೇರಿಸಿತು. ಸಾಯಿ ಸುದರ್ಶನ್, ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅರ್ಧಶತಕಗಳ ಕೊಡುಗೆ ನೀಡಿದರೆ, ಅಫ್ಘಾನಿಸ್ತಾನ ಪರ ಸಲೀಂ ಸಫಿ 6 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ತಂಡ, ಭಾರತದ ಸ್ಪಿನ್ನರ್ ಮಾನವ್ ಸುತಾರ್ (3/21) ಅವರ ಮಾರಕ ದಾಳಿಗೆ ನಲುಗಿ 113 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಪ್ರವಾಸಿ ಅಫ್ಘಾನಿಸ್ತಾನ ತಂಡವು ಎರಡನೇ ದಿನದಾಟದಲ್ಲಿ ಭಾರತದ ಮೊದಲ ಇನ್ನಿಂಗ್ಸ್ ಮೊತ್ತಕ್ಕಿಂತ ಇನ್ನು 451 ರನ್ಗಳ ಭಾರಿ ಹಿನ್ನಡೆಯಲ್ಲಿದೆ, (ಏಜೆನ್ಸೀಸ್).