ಹಲವು ಬಾರಿ ಪರಿಶೀಲಿಸಿದ ಮೂರನೇ ಅಂಪೈರ್, ಬ್ಯಾಟರ್ ಓಡಿಹೋಗುವಾಗ ದಿಕ್ಕನ್ನು ಬದಲಾಯಿಸಿದ್ದಾರೆ ಮತ್ತು ಚೆಂಡು ವಿಕೆಟ್ ಕೀಪರ್‌ಗೆ ತಲುಪದಂತೆ ತಡೆದಿದ್ದಾರೆ ಎಂದು ಭಾವಿಸಿದರು. ಹೀಗಾಗಿ, ಮೈದಾನಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಅವರನ್ನು ಔಟ್ ಎಂದು ಘೋಷಿಸಿದರು. ಇದೇ ವೇಳೆ ರಘುವಂಶಿ ಅವರು ಮೈದಾನದಲ್ಲಿದ್ದ ಅಂಪೈರ್‌ಗಳೊಂದಿಗೆ ವಾದಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ, ಅವರು ಹತಾಶೆಯಿಂದ ಪೆವಿಲಿಯನ್‌ಗೆ ಹೋಗುವಾಗ, ಬೌಂಡರಿ ಕುಶನ್ಗೆ ತಮ್ಮ ಬ್ಯಾಟ್ ಅನ್ನು ಬಡಿದರು. ಬಳಿಕ ಬ್ಯಾಟ್ ಮತ್ತು ಹೆಲ್ಮೆಟ್ ಅನ್ನು ಎಸೆದರು. ಹೀಗಾಗಿ, ಇದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ, ದಂಡ ವಿಧಿಸಲಾಗಿದೆ, (ಏಜೆನ್ಸೀಸ್).