ಅಂಧರ ಕ್ರಿಕೆಟ್​: ಕರ್ನಾಟಕ ರಾಷ್ಟ್ರೀಯ ಚಾಂಪಿಯನ್​

ಅಂಧರ ಕ್ರಿಕೆಟ್​: ಕರ್ನಾಟಕ ರಾಷ್ಟ್ರೀಯ ಚಾಂಪಿಯನ್​
ಅಂಧರ ಕ್ರಿಕೆಟ್​: ಕರ್ನಾಟಕ ರಾಷ್ಟ್ರೀಯ ಚಾಂಪಿಯನ್​
Published on
ಬೆಂಗಳೂರು: ಕರ್ನಾಟಕ ತಂಡ ಗುರುಗ್ರಾಮದಲ್ಲಿ ಶುಕ್ರವಾರ ಮುಕ್ತಾಯಗೊಂಡ 8ನೇ ಆವೃತ್ತಿಯ ನಾಗೇಶ್​ ಟ್ರೋಫಿ (Nagesh Trophy) ಅಂಧ ಪುರುಷರ ಟಿ20 ಕ್ರಿಕೆಟ್ (blind cricket)​ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟವೇರಿದೆ. ಥಾವು ದೇವಿ ಲಾಲ್​ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ ದೆಹಲಿ ವಿರುದ್ಧ ಸೂಪರ್​ ಓವರ್​ನಲ್ಲಿ ರೋಚಕ ಗೆಲುವು ಸಾಧಿಸಿತು.
ಭಾರತೀಯ ಅಂಧರ ಕ್ರಿಕೆಟ್​ ಸಂಸ್ಥೆ (ಸಿಎಬಿಐ) ಆಯೋಜಿಸಿದ್ದ ಟೂರ್ನಿಯ ಪ್ರಶಸ್ತಿ ಕಾದಾಟದಲ್ಲಿ ಕರ್ನಾಟಕ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್​ಗೆ ಇಳಿದ ದೆಹಲಿ 6 ವಿಕೆಟ್​ಗೆ 216 ರನ್​ ಗಳಿಸಿತು. ಪ್ರತಿಯಾಗಿ ಕರ್ನಾಟಕ ತಂಡ ಸುನೀಲ್​ ರಮೇಶ್​ (145*ರನ್​, 79 ಎಸೆತ, 24 ಬೌಂಡರಿ) ಶತಕದಾಟದಿಂದ 1 ವಿಕೆಟ್​ಗೆ 216 ರನ್​ ಗಳಿಸಿ ಟೈ ಸಾಧಿಸಿತು. ನಂತರ ನಡೆದ ಸೂಪರ್​ ಓವರ್​ನಲ್ಲಿ ಕರ್ನಾಟಕ 1 ವಿಕೆಟ್​ಗೆ 11 ರನ್​ ಗಳಿಸಿದರೆ, ದೆಹಲಿ ತಂಡ ವಿಕೆಟ್​ ನಷ್ಟವಿಲ್ಲದೆ 10 ರನ್​ ಗಳಿಸಿ ಸೋಲೊಪ್ಪಿಕೊಂಡಿತು.

ಚಾಂಪಿಯನ್​ ಕರ್ನಾಟಕ ತಂಡ 1.5 ಲಕ್ಷ ರೂ. ಮತ್ತು ರನ್ನರ್​ಅಪ್​ ದೆಹಲಿ ತಂಡ 1.25 ಲಕ್ಷ ರೂ. ಬಹುಮಾನ ಗಳಿಸಿತು. ಸುನೀಲ್​ ರಮೇಶ್​ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ 10 ಸಾವಿರ ರೂ. ಪಡೆದರು. 3 ವಿಭಾಗಗಳಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗಳಿಸಿದ ಸಂಜಯ್​ ಕುಮಾರ್​ ಶಾ (ಬಿ1), ರಾಮ್​ಬೀರ್​ ಸಿಂಗ್​ (ಬಿ2), ಸುನೀಲ್​ ರಮೇಶ್​ (ಬಿ3) ತಲಾ 20 ಸಾವಿರ ರೂ. ಪಡೆದರು. 29 ತಂಡಗಳು ಸ್ಪರ್ಧಿಸಿದ ಟೂರ್ನಿಯಲ್ಲಿ ಒಟ್ಟು 73 ಪಂದ್ಯಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net