ಹಾಲಿ ವರ್ಷ ಚಾಂಪಿಯನ್ಸ್ ಟ್ರೋಫಿ, ಐಪಿಎಲ್, ಇಂಗ್ಲೆಂಡ್ ಪ್ರವಾಸ, ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಿಡುವಿಲ್ಲದೇ ಆಡಿರುವ ಗಿಲ್ ಜತೆಗೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಉಪನಾಯಕ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಬದಲಿ ಆಟಗಾರರನ್ನೂ ಆಯ್ಕೆ ಮಾಡಬೇಕಿದೆ. ಗಿಲ್ ಗೈರಿನಲ್ಲಿ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಹನ್ನೊಂದರ ಬಳಗದಲ್ಲಿ ಸ್ಥಾನ ಖಾತ್ರಿಪಡಿಸಿಕೊಳ್ಳುವ ಸಾಧ್ಯತೆಗಳಿವೆ. 15ರ ಬಳಗದಲ್ಲಿ ಗಿಲ್ ಸ್ಥಾನವನ್ನು ಋತುರಾಜ್ ಗಾಯಕ್ವಾಡ್ ತುಂಬಲಿದ್ದರೆ, ಶ್ರೇಯಸ್ ಸ್ಥಾನಕ್ಕೆ ಬದಲಿಯಾಗಿ ತಿಲಕ್ ವರ್ಮ ಸ್ಥಾನ ಪಡೆಯುವ ನಿರೀಕ್ಷೆ ಇದೆ.