

ಬರೋಬ್ಬರಿ 20 ತಿಂಗಳುಗಳ ನಂತರ ಟೆಸ್ಟ್ ತಂಡಕ್ಕೆ ಪುನರಾಗಮನ ಕಂಡ ಕರ್ನಾಟಕ ತಂಡದ ನಾಯಕ ಹಾಗೂ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ (131* ರನ್, 178 ಎಸೆತ, 12 ಬೌಂಡರಿ, 1 ಸಿಕ್ಸರ್) ಚೊಚ್ಚಲ ಅಂತಾರಾಷ್ಟ್ರೀಯ ಶತಕದ ನೆರವಿನಿಂದ ಭಾರತ ತಂಡ, ಆತಿಥೇಯ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭರ್ಜರಿ ಆರಂಭ ಕಂಡಿದೆ.
ಪಡಿಕ್ಕಲ್ ಜತೆಗೆ ಮತ್ತೋರ್ವ ಕನ್ನಡಿಗ ಹಾಗೂ ಉಪನಾಯಕ ಕೆಎಲ್ ರಾಹುಲ್ (77 ರನ್, 162 ಎಸೆತ, 9 ಬೌಂಡರಿ, 1 ಸಿಕ್ಸರ್) ಆಕರ್ಷಕ ಜತೆಯಾಟದ ನೆರವಿನಿಂದ ಶುಭಮಾನ್ ಗಿಲ್ ಬಳಗ ಮೊದಲ ಟೆಸ್ಟ್‌ನ ಆರಂಭಿಕ ದಿನದ ಗೌರವ ಸಂಪಾದಿಸಿದ್ದು, ಬೃಹತ್ ಮೊತ್ತ ಪೇರಿಸುವ ನಿರೀಕ್ಷೆ ಹರಡಿದೆ.