2006ರ ಬಳಿಕ ಕೈಫ್, ಟೀಮ್ ಇಂಡಿಯಾದಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ, ಯುವರಾಜ್ ಮತ್ತು ಸೆಹ್ವಾಗ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ ಅನ್ನು ಮುಂದುವರೆಸಿದರು. ಯುವರಾಜ್ 2007ರ ಟಿ20 ಮತ್ತು 2011ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ದೊಡ್ಡ ಗೆಲುವು ತಂದುಕೊಟ್ಟ ಯುವರಾಜ್, ಈ ಟೂರ್ನಿಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಬಹುತೇಕರಿಗೆ ಗೊತ್ತೇ ಇದೆ. ನೆಟ್ಫ್ಲಿಕ್ಸ್ನಲ್ಲಿ ಇನ್ನೂ ಪ್ರಸಾರವಾಗದ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನ ಸಂಚಿಕೆಯಲ್ಲಿ ಮಾತನಾಡಿರುವ ಕೈಫ್, ಯುವರಾಜ್ ಮತ್ತು ಸೆಹ್ವಾಗ್ ನನಗಿಂತ ಹೆಚ್ಚು ಶ್ರೀಮಂತರು ಎಂಬ ಹೇಳಿಕೆ ವೈರಲ್ ಆಗಿದೆ.