2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್ ಪದಾರ್ಪಣೆ ಮಾಡುತ್ತಿರುವುದರಿಂದ, ಭಾರತದಲ್ಲಿ ಕ್ರೀಡೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಈ ಟೂರ್ನಿ ಸಹಕಾರಿಯಾಗಿದೆ. ಮಾರ್ಚ್ 18 ಮೊದಲ ಸುತ್ತಿನ ಪಂದ್ಯಗಳು (ಮಧ್ಯಾಹ್ನ 12:00ರಿಂದ), ಮಾರ್ಚ್ 19, ಎರಡನೇ ಸುತ್ತು, ಮಾರ್ಚ್ 20 ಕ್ವಾರ್ಟರ್ ಫೈನಲ್ಸ್, ಮಾರ್ಚ್ 21 ಸೆಮಿಫೈನಲ್ಸ್ ಮತ್ತು ಮಾರ್ಚ್ 22ರಂದು ಅಂತಿಮ ಹಣಾಹಣಿ ನಡೆಯಲಿದೆ.