ಹೌದು, ಬುಮ್ರಾ ಎಸೆಯುವ ಯಾರ್ಕರ್‌ಗಳು, ನಿಧಾನಗತಿಯ ಎಸೆತಗಳು, ಬಿಗಿಯಾದ ಲೈನ್ ಅಂಡ್ ಲೆಂತ್‌ಗಳಿಂದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡುತ್ತಾರೆ. ಕೆಲವೊಮ್ಮೆ ಮಾರಕ ಬೌನ್ಸರ್ಗಳನ್ನು ಹಾಕಿ ಬ್ಯಾಟ್ಸ್ಮನ್ಗೆ ಕಾಟ ಕೊಡುತ್ತಾರೆ. ಹೀಗಾಗಿ, ಬುಮ್ರಾ ಅವರ ಬೌಲಿಂಗ್‌ನಲ್ಲಿ ಸಿಕ್ಸರ್‌ಗಳನ್ನು ಹೊಡೆಯುವುದು ಅಷ್ಟು ಸುಲಭವಲ್ಲ. ಆದರೆ, ಕೆಲ ಬ್ಯಾಟ್ಸ್‌ಮನ್‌ಗಳು ಬುಮ್ರಾ ಅವರ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿ ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.