"ನಾನು ಮೇಡನ್ ಓವರ್ ಮಾಡಿದ್ದ ವಿಡಿಯೋವನ್ನು ನೋಡಿದ ಬುಮ್ರಾ, ಹೇಗೆ ನೀವು ಆ ರೀತಿ ಬೌಲ್ ಮಾಡ್ತೀರಾ? ನನಗೂ ಹೇಳಿಕೊಡಿ ಎಂದರು. ನೆಟ್ ಪ್ರಾಕ್ಟಿಸ್ನಲ್ಲಿ ನಾನು ಬೌಲಿಂಗ್ ಮಾಡುತ್ತಿದ್ದೆ. ಅಂದಿನ ಮುಂಬೈ ಇಂಡಿಯನ್ಸ್ನ ಬೌಲಿಂಗ್ ಕೋಚ್ ಶೇನ್ ಬಾಂಡ್ ಆಗಿದ್ದರು. ನಾನು ಮಾಡಿದ ಸ್ಲೋವರ್ ಬಾಲ್ಗಳಿಗೆ ಅಲ್ಲಿನ ಬ್ಯಾಟರ್ಗಳು ವಿಕೆಟ್ ಕಳೆದುಕೊಂಡರು. ಇದನ್ನು ನೋಡಿದ ಕೋಚ್, ನಿಮ್ಮಿಂದ ಕಲಿಯುವುದಿದೆ ಎಂದು ಮೆಚ್ಚಿದರು. ಈ ವೇಳೆ, ನನ್ನ ಹಿಡಿತ, ಬೌಲಿಂಗ್ ಶೈಲಿಯ ವಿಧಾನವನ್ನು ಬುಮ್ರಾ ಹೇಳಿಸಿಕೊಂಡರು. ಈಗ ನಾನು ಒಬ್ಬ ಯುಎಇ ಆಟಗಾರ, ಅದೇ ಬುಮ್ರಾ ಒಬ್ಬ ವಿಶ್ವ ದರ್ಜೆಯ ವೇಗಿ" ಎಂದು ಹೇಳಿದರು,(ಏಜೆನ್ಸೀಸ್).