ಜಹೀರ್ ಖಾನ್​, ವಾಸಿಮ್​ ಅಕ್ರಂ... ದಿಗ್ಗಜ ಬೌಲರ್​ಗಳ ದಾಖಲೆ ಮುರಿದ ಜಸ್ಪ್ರೀತ್​ ಬುಮ್ರಾ

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಪರೂಪದ ಸಾಧನೆ
  • ದಿಗ್ಗಜ ಬೌಲರ್​ಗಳ ದಾಖಲೆಗಳು ಬ್ರೇಕ್
Jasprit Bumrah: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಪರೂಪದ ಸಾಧನೆಗೈದಿದ್ದು, ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಐದು ವಿಕೆಟ್ ಪಡೆದ ಏಷ್ಯಾದ ವೇಗದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಇಂದು ಕೋಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಬುಮ್ರಾ ಈ ಮೈಲಿಗಲ್ಲು ತಲುಪಿದ್ದಾರೆ.
ಈ ವಿಷಯದಲ್ಲಿ ಅವರು ಪಾಕ್​ನ ಮಾಜಿ ವೇಗಿ ವಾಸಿಮ್ ಅಕ್ರಮ್ ಅವರನ್ನು ಹಿಂದಿಕ್ಕಿದ್ದಾರೆ. ಅಕ್ರಮ್, ಸೆನಾ ದೇಶಗಳ ವಿರುದ್ಧ 44 ಪಂದ್ಯಗಳನ್ನಾಡಿದ್ದು, 12 ಬಾರಿ ಐದು ವಿಕೆಟ್ ಗಳಿಸಿದ್ದಾರೆ. ಬುಮ್ರಾ 43 ಪಂದ್ಯಗಳಲ್ಲಿ 13 ಬಾರಿ ಐದು ವಿಕೆಟ್​ ಪಡೆದಿದ್ದಾರೆ. ಇವರಿಬ್ಬರ ನಂತರದಲ್ಲಿ, ಕಪಿಲ್ ದೇವ್ ಮತ್ತು ವಾಖರ್​ ಯೂನಿಸ್ ಈ ಪಟ್ಟಿಯಲ್ಲಿದ್ದಾರೆ. 
ಟೆಸ್ಟ್ ಪಂದ್ಯಗಳಲ್ಲಿ ಸೆನಾ ರಾಷ್ಟ್ರಗಳ ವಿರುದ್ಧ ಅತಿ ಹೆಚ್ಚು ಐದು ವಿಕೆಟ್ ಪಡೆದ ಏಷ್ಯಾದ ವೇಗದ ಬೌಲರ್‌ಗಳಿವರು
1. ಜಸ್ಪ್ರೀತ್ ಬುಮ್ರಾ (ಭಾರತ) - 13 ಬಾರಿ (43 ಪಂದ್ಯ)
2. ವಾಸಿಮ್ ಅಕ್ರಮ್ (ಪಾಕಿಸ್ತಾನ) - 12 ಬಾರಿ (44 ಪಂದ್ಯ)
3. ಕಪಿಲ್ ದೇವ್ (ಭಾರತ) - 11 ಬಾರಿ (61 ಪಂದ್ಯ)
4. ವಾಖರ್ ಯೂನಿಸ್ (ಪಾಕಿಸ್ತಾನ) - 9 ಬಾರಿ (43 ಪಂದ್ಯ)
5. ಇಮ್ರಾನ್ ಖಾನ್ (ಪಾಕಿಸ್ತಾನ) - 8 ಬಾರಿ (37 ಪಂದ್ಯ)
6. ಜಹೀರ್ ಖಾನ್ (ಭಾರತ) - 8 ಬಾರಿ (57 ಪಂದ್ಯ)
7. ಶೋಯೆಬ್ ಅಖ್ತರ್ (ಪಾಕಿಸ್ತಾನ) - 8 ಬಾರಿ (21 ಪಂದ್ಯ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net