ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್: 2 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೇರಿದ ಸಿಂಧು

ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್: 2 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೇರಿದ ಸಿಂಧು
ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್: 2 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೇರಿದ ಸಿಂಧು
Published on
ಟೋಕಿಯೊ: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಎರಡು ವರ್ಷಗಳ ನಂತರ ಬಿಡಬ್ಲುೃಎಫ್ ಪ್ರಮುಖ ಟೂರ್ನಿಯಲ್ಲಿ ಫೈನಲ್‌ಗೇರಿದರು. ಶನಿವಾರ ನಡೆದ ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ (Japan Open Super 750 Badminton) ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ 31 ವರ್ಷದ ಸಿಂಧು 21-19, 15-10ರಿಂದ ಮುನ್ನಡೆಯಲ್ಲಿದ್ದಾಗ ವಿಶ್ವ ನಂ.4 ಹಾಗೂ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಯುಫೀ ಬಲ ತೊಡೆಯ ಸ್ನಾಯು ಸೆಳೆತದ ಸಮಸ್ಯೆಯಿಂದ ಹಿಂದೆ ಸರಿದರು. ಇದರೊಂದಿಗೆ ಉಪಾಂತ್ಯಕ್ಕೇರಿದ ಸಿಂಧು ಪ್ರಶಸ್ತಿಗಾಗಿ ಆತಿಥೇಯ ತಾರೆ ಅಕಾನೆ ಯಮಗುಚಿ ಎದುರು ಸೆಣಸಲಿದ್ದಾರೆ.
2024ರಲ್ಲಿ ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಪ್ರಶಸ್ತಿ ಗೆದ್ದ ನಂತರ ಸಿಂಧು ಆಡಲಿರುವ ಮೊದಲ ಫೈನಲ್ ಇದಾಗಿದೆ. ಇದಕ್ಕೆ ಮುನ್ನ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರೆ. 2022ರಲ್ಲಿ ಕೊನೆಯದಾಗಿ ಪ್ರಮುಖ ಟೂರ್ನಿಯಲ್ಲಿ (ಸಿಂಗಾಪುರ ಓಪನ್) ಚಾಂಪಿಯನ್ ಆಗಿದ್ದರು. ಫೈನಲ್‌ಗೆ ಅರ್ಹತೆ ಪಡೆದಿರುವುದು ಖುಷಿ ನೀಡಿದೆ. ಚೆನ್ ಫಿಯೀ ಅವರಂಥ ಆಟಗಾರ್ತಿಯ ಎದುರು ಮಾನಸಿಕವಾಗಿ ಸದೃಢವಾಗಿರುವುದು ಬಹಳ ಮುಖ್ಯ. ಮೊದಲ ಗೇಮ್ ನಂತರವೂ ಕೇವಲ ಮುಂದಿನ ಅಂಕ ಪಡೆಯುವತ್ತ ಗಮನ ಹರಿಸುವಂತೆ ಕೋಚ್ ಸಲಹೆ ನೀಡಿದರು’ ಎಂದು ಸಿಂಧು ಪಂದ್ಯದ ಬಳಿಕ ಸಂತಸ ವ್ಯಕ್ತಪಡಿಸಿದರು.ಬಿಡಬ್ಲುೃಎಫ್ ರ‌್ಯಾಂಕಿಂಗ್‌ನಲ್ಲಿ 18ನೇ ಸ್ಥಾನದೊಂದಿಗೆ ಹಾಲಿ ವರ್ಷ ಆರಂಭಿಸಿದ ಸಿಂಧು ಫೈನಲ್‌ಗೇರುವ ಮೂಲಕ 9ನೇ ಸ್ಥಾನಕ್ಕೆ ಬಡ್ತಿ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net