ಪ್ರಸ್ತುತ, ಗುಜರಾತ್ ಶಿಕ್ಷಣ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿರುವ ರಿವಾಬಾ, "ನನ್ನ ಪತಿ ಕ್ರಿಕೆಟ್ ಸಲುವಾಗಿ ಆಗಾಗ್ಗೆ ಲಂಡನ್, ದುಬೈ, ಆಸ್ಟ್ರೇಲಿಯಾ ಸೇರಿ ಹಲವೆಡೆ ಪ್ರಯಾಣಿಸುತ್ತಿರುತ್ತಾರೆ. ಆ ಸಮಯದಲ್ಲಿ ಅವರು ಬೇಡದ ಚಟುವಟಿಕೆ ಅಥವಾ ಕೆಟ್ಟ ಪ್ರಪಂಚದತ್ತ ಸುಳಿಯುವ ಆಸಕ್ತಿ ತೋರುವುದಿಲ್ಲ. ಅಸಲಿಗೆ, ಅಂತಹ ಕೆಟ್ಟ ಚಟ ಅವರಿಗಿಲ್ಲ. ಆದರೆ, ಟೀಮ್ ಇಂಡಿಯಾದ ಕೆಲ ಕ್ರಿಕೆಟಿಗರು ಅಂಥಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ" ಎಂದಿದ್ದಾರೆ.