ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಡೇಜಾ, "ಈ ಪ್ರಶಸ್ತಿಯನ್ನು ನಾನು ಗುಜರಾತ್‌ನ ಶಿಕ್ಷಣ ಸಚಿವರಿಗೆ (ಪತ್ನಿ ರಿವಾಬಾ) ಅರ್ಪಿಸುತ್ತೇನೆ. ಪಂದ್ಯದ ಹಿಂದಿನ ದಿನವೇ ಅವರು, ನೀನು ನಾಳೆ ಅದ್ಭುತವಾಗಿ ಆಡುತ್ತೀಯ ಮತ್ತು ತಂಡಕ್ಕೆ ಗೆಲುವು ತಂದುಕೊಡುತ್ತೀಯ ಎಂದು ಹೇಳಿದ್ದರು. ಅವರ ಮಾತು ನಿಜವಾಗಿದೆ. ಪಿಚ್ ಬ್ಯಾಟಿಂಗ್‌ಗೆ ಕಷ್ಟವಿತ್ತು, ಹಾಗಾಗಿ ದೀರ್ಘಕಾಲ ಕ್ರೀಸ್‌ನಲ್ಲಿ ನಿಲ್ಲಲು ಬಯಸಿದ್ದೆ" ಎಂದು ಭಾವನಾತ್ಮಕವಾಗಿ ನುಡಿದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ,(ಏಜೆನ್ಸೀಸ್).