ಡೆಲ್ಲಿ ತಂಡದ ಕ್ಷೀಣ ಆಸೆಯನ್ನು ಜೀವಂತವಿಟ್ಟ ಮಿಚೆಲ್​ ಸ್ಟಾರ್ಕ್​ಗೆ ನಾಯಕ ಅಕ್ಷರ್​ ಪಟೇಲ್​ ಮೆಚ್ಚುಗೆ

ಡೆಲ್ಲಿ ತಂಡದ ಕ್ಷೀಣ ಆಸೆಯನ್ನು ಜೀವಂತವಿಟ್ಟ ಮಿಚೆಲ್​ ಸ್ಟಾರ್ಕ್​ಗೆ ನಾಯಕ ಅಕ್ಷರ್​ ಪಟೇಲ್​ ಮೆಚ್ಚುಗೆ
ಡೆಲ್ಲಿ ತಂಡದ ಕ್ಷೀಣ ಆಸೆಯನ್ನು ಜೀವಂತವಿಟ್ಟ ಮಿಚೆಲ್​ ಸ್ಟಾರ್ಕ್​ಗೆ ನಾಯಕ ಅಕ್ಷರ್​ ಪಟೇಲ್​ ಮೆಚ್ಚುಗೆ
Published on
ನವದೆಹಲಿ: ರಾಜಸ್ಥಾನ ರಾಯಲ್ಸ್​ ವಿರುದ್ಧ 5 ವಿಕೆಟ್​ಗಳಿಂದ ಗೆಲುವು ಸಾಧಿಸಿ ಪ್ಲೇಆಫ್​ಗೇರುವ ತನ್ನ ಕ್ಷೀಣ ಆಸೆಯನ್ನು ಜೀವಂತವಿಟ್ಟುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಅಕ್ಷರ್​ ಪಟೇಲ್ (Axar Patel)​, ಬೌಲಿಂಗ್​ ವಿಭಾಗವನ್ನು, ಅದರಲ್ಲೂ ಪ್ರಮುಖವಾಗಿ ಆಸೀಸ್​ ವೇಗಿ ಮಿಚೆಲ್​ ಸ್ಟಾರ್ಕ್​ (Mitchell Starc) ಅವರನ್ನು ಕೊಂಡಾಡಿದ್ದಾರೆ.
"ಮಧ್ಯಮ ಓವರ್​ಗಳಲ್ಲಿ ನಾವು ಅತ್ಯುತ್ತಮ ದಾಳಿ ಸಂಟಿಸುವ ಮೂಲಕ ಪಂದ್ಯಕ್ಕೆ ಮರಳಿದೆವು. ಕೊನೇ 6 ಓವರ್​ಗಳ ಬೌಲಿಂಗ್​ ಕ್ಲಾಸ್​ ಆಗಿತ್ತು. ಸ್ಟಾರ್ಕ್​ "ಯುವ' ಆಟಗಾರರಂತೆ ಬೌಲಿಂಗ್​ ಮಾಡುತ್ತಿದ್ದಾರೆ' ಎಂದು ಅಕ್ಷರ್​ ಪಂದ್ಯದ ಬಳಿಕ ಹೇಳಿದ್ದಾರೆ.

14 ಓವರ್​ಗಳಲ್ಲಿ 2 ವಿಕೆಟ್​ಗೆ 160 ರನ್​ ಗಳಿಸಿ ಸುಸ್ಥಿತಿಯಲ್ಲಿದ್ದ ರಾಜಸ್ಥಾನ ಬಳಿಕ, ಮಿಚೆಲ್​ ಸ್ಟಾರ್ಕ್​ (40ಕ್ಕೆ 4) ದಾಳಿಗೆ ಕುಸಿದು 8 ವಿಕೆಟ್​ಗೆ 193 ರನ್​ ಗಳಿಸಲಷ್ಟೇ ಶಕ್ತವಾಗಿತ್ತು. ಪ್ರತಿಯಾಗಿ ಡೆಲ್ಲಿ ಕನ್ನಡಿಗ ಕೆಎಲ್​ ರಾಹುಲ್​ (56) ಮತ್ತು ಅಭಿಷೇಕ್​ ಪೊರೆಲ್​ (51) ಅರ್ಧಶತಕದಾಟ ಮತ್ತು ಮೊದಲ ವಿಕೆಟ್​ಗೆ 61 ಎಸೆತಗಳಲ್ಲಿ 105 ರನ್​ ಕೂಡಿಹಾಕಿದ ಬಲದಿಂದ ದಿಟ್ಟವಾಗಿ ಚೇಸಿಂಗ್​ನತ್ತ ಮುನ್ನಡೆಯಿತು. ಬಳಿಕ ಸಾಹಿಲ್​ ಪರಾಖ್​ (9), ಟ್ರಿಸ್ಟಾನ್​ ಸ್ಟಬ್ಸ್​ (4), ಡೇವಿಡ್​ ಮಿಲ್ಲರ್​ (9) ಬೇಗನೆ ಔಟಾದರೂ, ಅಕ್ಷರ್​ ಪಟೇಲ್​ (34*) ಮತ್ತು ಇಂಪ್ಯಾಕ್ಟ್​ ಪ್ಲೇಯರ್​ ಆಶುತೋಷ್​ ಶರ್ಮ (18*) ದಿಟ್ಟ ಜತೆಯಾಟದಿಂದ ಡೆಲ್ಲಿ 19.2 ಓವರ್​ಗಳಲ್ಲಿ 5 ವಿಕೆಟ್​ಗೆ 197 ರನ್​ ಗಳಿಸಿ ಗೆಲುವಿನ ದಡ ಸೇರಿತು.
*ಟೂರ್ನಿಯಲ್ಲಿ 500 ರನ್​ ಪೂರೈಸಿದ್ದು ಖುಷಿ ನೀಡಿದೆ. ಆದರೆ, ನಾವು ಇನ್ನಷ್ಟು ಪಂದ್ಯಗಳನ್ನು ಗೆದ್ದಿದ್ದರೆ, ಇದು ಇನ್ನಷ್ಟು ವಿಶೇಷವೆನಿಸುತಿತ್ತು.
| ಕೆಎಲ್​ ರಾಹುಲ್​, ಡೆಲ್ಲಿ ಬ್ಯಾಟರ್​
*8: ಕೆಎಲ್​ ರಾಹುಲ್​ ಐಪಿಎಲ್​ ಆವೃತ್ತಿಯೊಂದರಲ್ಲಿ ಸತತ 3ನೇ ಬಾರಿ ಮತ್ತು ಒಟ್ಟಾರೆ 8ನೇ ಬಾರಿ 500 ಪ್ಲಸ್​ ರನ್​ ಗಳಿಸಿದರು.
*4: ಯಶಸ್ವಿ ಜೈಸ್ವಾಲ್​ ಟಿ20 ಕ್ರಿಕೆಟ್​ನಲ್ಲಿ 4 ಸಾವಿರ ರನ್​ ಪೂರೈಸಿದ ಸಾಧನೆ ಮಾಡಿದರು.
*5: ಡೆಲ್ಲಿ ತಂಡ ತವರಿನ ಅಂಗಣದಲ್ಲಿ ಸತತ 5 ಸೋಲಿನ ಬಳಿಕ ಗೆಲುವು ದಾಖಲಿಸಿತು.
*ನಮಗೆ ಸಿಕ್ಕ ಉತ್ತಮ ಆರಂಭದ ಬಳಿಕ 210ಕ್ಕೂ ಅಧಿಕ ರನ್​ ಗಳಿಸಬಹುದಾಗಿತ್ತು. ನಮ್ಮ ಬೌಲಿಂಗ್​ ಕೂಡ ಇನ್ನಷ್ಟು ಉತ್ತಮವಾಗಿರಬೇಕಿತ್ತು. ನಾವಿನ್ನು ಪ್ಲೇಆಫ್​​ಗೆ ಏರದಿದ್ದರೆ ಅದು ನಮ್ಮದೇ ತಪ್ಪು ಆಗಿರಲಿದೆ.
| ರಿಯಾನ್​ ಪರಾಗ್​, ಆರ್​ಆರ್​ ನಾಯಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net