ಫಲಿತಾಂಶಗಳು ನಿರೀಕ್ಷೆಯಂತೆ ಬರದಿದ್ದಾಗ, ಹೊರಗೆ ಸಾಕಷ್ಟು ಚರ್ಚೆ ನಡೆಯುತ್ತದೆ ಅನ್ನೋದು ನನಗೆ ಗೊತ್ತಿದೆ. ಆದಾಗ್ಯೂ, ನನ್ನನ್ನು ಆಶ್ಚರ್ಯಗೊಳಿಸುವ ಸಂಗತಿ ಏನೆಂದರೆ, ಮೊದಲ ಟೆಸ್ಟ್‌ನಲ್ಲಿ, ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ನಾಯಕ ಶುಭಮಾನ್ ಗಿಲ್ ಅವರ ಬ್ಯಾಟಿಂಗ್ ಸೇವೆಯನ್ನು ನಾವು ಕಳೆದುಕೊಂಡೆವು ಮತ್ತು ನಾವು ಸೋತಿದ್ದಕ್ಕೆ ಇದು ಕೂಡ ಕಾರಣ. ಆದರೆ, ಯಾರೊಬ್ಬರು ಕೂಡ ಈ ವಿಷಯದ ಬಗ್ಗೆ ಮಾತನಾಡಲಿಲ್ಲ, ಯಾವುದೇ ಮಾಧ್ಯಮಗಳು ಕೂಡ ಇದರ ಬಗ್ಗೆ ಬರೆಯಲಿಲ್ಲ ಎಂದು ಗಂಭೀರ್ ಬೇಸರ ಹೊರಹಾಕಿದರು.