ಇದೇ ಕಾರಣಕ್ಕೆ ನಾವು ಸೋತಿದ್ದು! ಆಂಗ್ಲರ ಎದುರು ಸೋಲುಂಡ ಬೆನ್ನಲ್ಲೇ ಇಶಾನ್​ ಕಿಶನ್​ ಓಪನ್​ ಟಾಕ್​

ವೈಭವ್ ಸೂರ್ಯವಂಶಿ, ಇಶಾನ್​ ಕಿಶನ್​
ವೈಭವ್ ಸೂರ್ಯವಂಶಿ, ಇಶಾನ್​ ಕಿಶನ್​
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 4 ವಿಕೆಟ್​ಗಳಿಂದ ಸೋಲು
  • ಗೆಲ್ಲುವ ಪಂದ್ಯ ಕೈಯಿಂದ ತಪ್ಪಿದ್ದಕ್ಕೆ ಇಶಾನ್ ಕಿಶನ್​ ಬೇಸರ
IND vs ENG: ಇಂಗ್ಲೆಂಡ್​ ಎದುರು 2ನೇ ಟಿ20 ಪಂದ್ಯದಲ್ಲಿ ಸೋತ ಟೀಮ್ ಇಂಡಿಯಾ, 4 ವಿಕೆಟ್​ಗಳ ಅಂತರದಲ್ಲಿ ಆಂಗ್ಲರ ಪಡೆಗೆ ಸುಲಭವಾಗಿ ಗೆಲ್ಲಲು ಅವಕಾಶ ಮಾಡಿಕೊಟ್ಟಿತು. 191 ರನ್​ಗಳ ಬಿಗ್ ಸ್ಕೋರ್​ ಅನ್ನೇ ಟಾರ್ಗೆಟ್​ ಆಗಿ ನೀಡಿದರೂ ಚೇಸಿಂಗ್​ನಲ್ಲಿ ಇಂಗ್ಲಿಷ್​ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ತಂಡ ವಿಫಲಗೊಂಡಿತು. ಈ ಬೇಸರದಲ್ಲೇ ಮಾತನಾಡಿದ ಇಶಾನ್​ ಕಿಶನ್, ತಮ್ಮ ತಂಡದ ಸೋಲಿಗೆ ಕಾರಣವೇನು ಎಂಬುದನ್ನು ಓಪನ್ ಆಗಿ ಹೇಳಿದ್ದಾರೆ.
ತಂಡದ ಪ್ರದರ್ಶನದ ಬಗ್ಗೆ ಪ್ರಾಮಾಣಿಕವಾಗಿ ಹೇಳಿದ ಇಶಾನ್​, ಪವರ್‌ಪ್ಲೇಯಲ್ಲಿ ಭಾರತ 65/2 ಸ್ಕೋರ್‌ನೊಂದಿಗೆ ಬಲಿಷ್ಠವಾಗಿ ಕಾಣಿಸಿತು. ಆದರೆ, 7 ಮತ್ತು 10 ಓವರ್‌ಗಳ ನಡುವೆ ಕೇವಲ 32 ರನ್‌ಗಳು ಮಾತ್ರ ಗಳಿಸಿತು. ಅಲ್ಲದೆ, 14 ಮತ್ತು 17 ಓವರ್‌ಗಳಲ್ಲಿ ಕೇವಲ 23 ರನ್‌ ಅಷ್ಟೇ ಬಂದಿರುವುದು. ತಂಡಕ್ಕೆ ಇನ್ನೂ ಹೆಚ್ಚುವರಿ ರನ್‌ಗಳನ್ನು ಗಳಿಸಲು ಅವಕಾಶವಿತ್ತು. ಆದರೆ, ಪಿಚ್ ಕಂಡೀಷನ್​ನಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದರು.
ಮುಖ್ಯವಾಗಿ ಚೇಸಿಂಗ್​ನಲ್ಲಿ ಪಂದ್ಯ ಗೆಲ್ಲುವ ಅವಕಾಶ ನಮಗಿತ್ತು. ಆದರೆ, 17ನೇ ಓವರ್​ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿತು. ರವಿ ಬಿಷ್ಣೋಯಿ ಎಸೆದ ಎರಡು ನೋ ಬಾಲ್‌ಗಳು ಮತ್ತು ಅದರಿಂದ ಸಿಕ್ಕ ಫ್ರೀ ಹಿಟ್‌ಗಳು ಇಂಗ್ಲೆಂಡ್ ಮೇಲಿನ ಒತ್ತಡವನ್ನು ಇಳಿಸಿತು. ಯಾವುದೇ ಪ್ರಯತ್ನವಿಲ್ಲದೆ ಎದುರಾಳಿಗೆ ಉಚಿತವಾಗಿ ನೀಡುವುದು ಟಿ20 ಪಂದ್ಯಗಳಲ್ಲಿ ದೊಡ್ಡ ನಷ್ಟ. ಈ ಓವರ್ ನಮ್ಮ ಸೋಲಿಗೆ ಮುಖ್ಯ ಕಾರಣವಾಯಿತು ಎಂದು ಹೇಳಿದರು.

ವೈಭವ್ ಸೂರ್ಯವಂಶಿಗೆ ಮೆಚ್ಚುಗೆ

ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು 15 ವರ್ಷ ಮತ್ತು 99 ದಿನಗಳ ವಯಸ್ಸಿಗೆ ಅಂತಾರಾಷ್ಟ್ರೀಯ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ನನ್ನ ಅಭಿನಂದನೆ. ವೈಭವ್ ಒಬ್ಬ ಅಸಾಧಾರಣ ಪ್ರತಿಭೆ ಎಂಬುದರಲ್ಲಿ ಅನುಮಾನವಿಲ್ಲ. ಹಿರಿಯ ಆಟಗಾರರಾಗಿ ಆತನನ್ನು ಪ್ರೋತ್ಸಾಹಿಸುವುದು ಮತ್ತು ಅವನಲ್ಲಿರುವ ವಿಶಿಷ್ಟ ಆಟದ ಶೈಲಿಯನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಕಿಶನ್ ಹೇಳಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net