ಇಶಾನ್​ ಕಿಶನ್ ಸ್ಫೋಟಕ ಶತಕವೇ ತಲೆಬಿಸಿ! ಬಿಸಿಸಿಐ ಆಯ್ಕೆಗಾರರ ನಿದ್ದೆಗೆಡಿಸಿದ ಜಾರ್ಖಂಡ್ ಡೈನಮೈಟ್

ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ ಇಶಾನ್ ಕಿಶನ್​
ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ ಇಶಾನ್ ಕಿಶನ್​
Published on

ಪ್ರಮುಖ ಮುಖ್ಯಾಂಶಗಳು

  • ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಶಾನ್​ ಕಿಶನ್​ ಶತಕದಾಟ
  • ತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ಪ್ರದರ್ಶನ
  • ಇಶಾನ್​ ಆಕ್ರಮಣಕಾರಿ ಬ್ಯಾಟಿಂಗ್​ ಬಿಸಿಸಿಐ ಆಯ್ಕೆಗಾರರಿಗೆ ತಲೆಬಿಸಿ
Ishan Kishan: ಐಪಿಎಲ್​ 19ನೇ ಆವೃತ್ತಿಗೂ ಮುನ್ನ ಟೀಮ್​ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಐಪಿಎಲ್​ ಮತ್ತು ಆಫ್ಗಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಪರ ಅಮೋಗ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಅವರ ಉತ್ತಮ ಪ್ರದರ್ಶನವೇ ಇದೀಗ ಬಿಸಿಸಿಐಗೆ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ.
ಬುಧವಾರ (ಜೂ.17) ಲಖನೌದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಕ್ಯಾಪ್ಟನ್​ ಶುಭಮನ್ ಗಿಲ್​ ಶತಕಕ್ಕೆ ಸಾಥ್​ ನೀಡಿದ ಇಶಾನ್ ಕಿಶನ್, ಕೇವಲ 79 ಎಸೆತಗಳಲ್ಲಿ 125 ರನ್​ ಬಾರಿಸಿದರು. ಇಂಜುರಿಯಿಂದ ವಿರಾಟ್​ ಕೊಹ್ಲಿ ತಂಡದಿಂದ ಹೊರಗುಳಿದರು. ಅವರ ಸ್ಥಾನ ಪಡೆದ ಇಶಾನ್ ಕಿಶನ್, 50 ಓವರ್​ ಪಂದ್ಯಗಳಲ್ಲಿಯೂ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ನಾಯಕ ಶುಭಮನ್ ಗಿಲ್ ಜೊತೆ ಸೇರಿ ಮೂರನೇ ವಿಕೆಟ್‌ಗೆ 224 ರನ್‌ಗಳ ದೊಡ್ಡ ಪಾರ್ಟ್​ನರ್​ಶಿಪ್​ ನಿರ್ಮಿಸಿದ ಇಶಾನ್ ಕಿಶನ್, 125 ರನ್ ಬಾರಿಸಿದರು. ಆರಂಭದಲ್ಲಿ 53 ಎಸೆತಕ್ಕೆ 50 ರನ್ ಗಳಿಸಿದ್ದ ಇಶಾನ್, ಕೇವಲ 19 ಎಸೆತಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಶತಕದಾಟ ತೋರಿದರು. ಇದು ತಂಡಕ್ಕೆ ಮತ್ತು ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿ ನೀಡಿದರೆ, ಬಿಸಿಸಿಐ ಆಯ್ಕೆಗಾರರ ಸಮಿತಿಗೆ ದೊಡ್ಡ ತಲೆನೋವಾಗಿದೆ. ಯಾರನ್ನು ಟೀಮ್ ಇಂಡಿಯಾದ ಓಪನರ್​ ಆಗಿ ಕಳುಹಿಸಬೇಕು ಎಂಬುದೇ ಸದ್ಯದ ಚಿಂತೆ.
ಏಕದಿನ ಫಾರ್ಮೆಟ್​ನಲ್ಲಿ ಈಗಾಗಲೇ ಟಾಪ್​ ಆರ್ಡರ್​ನಲ್ಲಿ​ ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶುಭಮನ್ ಗಿಲ್​, ರೋಹಿತ್ ಅವರಂತಹ ಸ್ಟಾರ್​ ಅನುಭವಿ ಬ್ಯಾಟರ್​ಗಳಿದ್ದಾರೆ. ಹೀಗಿರುವಾಗ, ಕಿಶನ್ ಫಾರ್ಮ್‌ಗೆ ಮರಳಿರುವುದು ಸದ್ಯ ಆಯ್ಕೆಗಾರರಿಗೆ ಯಾರನ್ನು ಆಡಿಸಬೇಕು? ಯಾರನ್ನು ಮಧ್ಯಮ ಕ್ರಮಾಂಕದಲ್ಲಿ ಫಿಕ್ಸ್ ಮಾಡಬೇಕು ಎಂಬ ತಲೆನೋವು ಶುರುವಾಗಿದೆ. ಆಫ್ಘನ್​ ವಿರುದ್ಧ ಶತಕ ಬಾರಿಸುವ ಮೂಲಕ ಟಾಪ್​ ಆರ್ಡರ್​ ರೇಸ್​ನಲ್ಲಿ ಇಶಾನ್ ಕೂಡ ಆಯ್ಕೆಗಾರರ ಗಮನ ಸೆಳೆದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net