ಕದ್ದು ನೋಡಿದ ವೈಭವ್​... ಪಂದ್ಯದ ಮಧ್ಯೆ ಮಾಡಿದ ಈ ಒಂದು ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ್ರಾ​ ಸೂರ್ಯವಂಶಿ? Vaibhav Suryavanshi

ಕದ್ದು ನೋಡಿದ ವೈಭವ್​... ಪಂದ್ಯದ ಮಧ್ಯೆ ಮಾಡಿದ ಈ ಒಂದು ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ್ರಾ​ ಸೂರ್ಯವಂಶಿ? Vaibhav Suryavanshi
ಕದ್ದು ನೋಡಿದ ವೈಭವ್​... ಪಂದ್ಯದ ಮಧ್ಯೆ ಮಾಡಿದ ಈ ಒಂದು ತಪ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ್ರಾ​ ಸೂರ್ಯವಂಶಿ? Vaibhav Suryavanshi
Published on

ಪ್ರಮುಖ ಮುಖ್ಯಾಂಶಗಳು

  • 19ನೇ ಆವೃತ್ತಿಯ ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಹದಿನೈದು ವರ್ಷದ ವೈಭವ್ ಸೂರ್ಯವಂಶಿ
  • ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ
  • ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 78 ರನ್ ಗಳಿಸಿದ ವೈಭವ್​
  • ರಾಜಸ್ಥಾನ ರಾಯಲ್ಸ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೈಭವ್​ ಸೂರ್ಯವಂಶಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ
Vaibhav Suryavanshi : ಪ್ರಸ್ತುತ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ( IPL ) 2026ರ ಭಾಗವಾಗಿ ನಿನ್ನೆ (ಏಪ್ರಿಲ್ 10) ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡಕ್ಕೆ ಸೋಲುಣಿಸಿತು. ಈ ಪಂದ್ಯದಲ್ಲಿ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ, ವೀರೋಚಿತ ಪ್ರದರ್ಶನ ನೀಡಿ ರಾಯಲ್ಸ್‌ಗೆ ಅಜೇಯ ಗೆಲುವು ತಂದುಕೊಟ್ಟರು. ಆದಾಗ್ಯೂ, ಈ ಪಂದ್ಯದ ಮಧ್ಯದಲ್ಲಿ ವೈಭವ್ ಮಾಡಿದ ಒಂದು ಕೆಲಸವು ಅವರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.
ಪಂದ್ಯದ ಸಮಯದಲ್ಲಿ, ವೈಭವ್ ಸೂರ್ಯವಂಶಿ ಅವರು ಡಗೌಟ್‌ನಲ್ಲಿ ಕುಳಿತು ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಅವರೊಂದಿಗೆ ತಮ್ಮ ಮೊಬೈಲ್ ಫೋನ್ ನೋಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಸಿಸಿಐ ನಿಯಮಗಳ ಪ್ರಕಾರ, ಆಟಗಾರರಾಗಲಿ ಅಥವಾ ಸಹಾಯಕ ಸಿಬ್ಬಂದಿಯಾಗಲಿ ಪಂದ್ಯದ ಸಮಯದಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ನೋಡಲು ಅಥವಾ ಬಳಸಲು ಅನುಮತಿಸಲಾಗುವುದಿಲ್ಲ.
ತಂಡದ ವ್ಯವಸ್ಥಾಪಕರಿಗೆ ಈ ವಿಷಯದಲ್ಲಿ ಒಂದು ವಿನಾಯಿತಿ ಇದೆ. ಅದೇನೆಂದರೆ, ವ್ಯವಸ್ಥಾಪಕರು ತಮ್ಮ ಫೋನ್ ಅನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತ್ರ ಬಳಸುವ ಅವಕಾಶ ಹೊಂದಿದ್ದಾರೆ. ಆದರೆ, ಡಗೌಟ್‌ನಲ್ಲಿ ತಮ್ಮ ಮೊಬೈಲ್ ಫೋನ್ ಅನ್ನು ಬಳಸಲು ಅನುಮತಿ ನೀಡುವುದಿಲ್ಲ. ಇದೀಗ ವ್ಯವಸ್ಥಾಪಕರ ಜೊತೆ ವೈಭವ್ ಕೂಡ ಡಗೌಟ್‌ನಲ್ಲಿ ಮೊಬೈಲ್​ ನೋಡುತ್ತಿರುವುದು ಕಂಡುಬಂದಿದೆ.
ಇಲ್ಲಿ ವೈಭವ್ ಅವರು ಸ್ವತಃ ತನ್ನ ಮೊಬೈಲ್ ಫೋನ್ ಅನ್ನು ಬಳಸುತ್ತಿಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಅವರು ರೋಮಿ ಬಿಂಧರ್​ ಮೊಬೈಲ್​ ಅನ್ನು ನೋಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮ್ಯಾನೇಜರ್ ಜೊತೆಗೆ ವೈಭವ್ ಕೂಡ ಈ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ನಿಯಮಗಳೇನು?
* ಮೊಬೈಲ್ ಫೋನ್‌ಗಳು ಮತ್ತು ಸಂವಹನ ಸಾಧನಗಳನ್ನು ಡಗೌಟ್‌ನಲ್ಲಿ ಅನುಮತಿಸಲಾಗುವುದಿಲ್ಲ
* ತಂಡದ ವ್ಯವಸ್ಥಾಪಕರು ಫೋನ್ ಅನ್ನು ಡ್ರೆಸ್ಸಿಂಗ್ ಕೋಣೆಯಲ್ಲಿ ಮಾತ್ರ ಬಳಸಬಹುದು ಮತ್ತು ಡಗೌಟ್‌ನಲ್ಲಿ ಅಲ್ಲ
* ವಿಶ್ಲೇಷಕರು ಕಂಪ್ಯೂಟರ್‌ಗಳನ್ನು ಬಳಸಬಹುದು, ಆದರೆ ವಿಶೇಷವಾಗಿ ಗೊತ್ತುಪಡಿಸಿದ ವಿಶ್ಲೇಷಕ ಟೇಬಲ್‌ನಲ್ಲಿ ಮಾತ್ರ
* ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕ್ರೀಡಾಂಗಣಕ್ಕೆ ಪ್ರವೇಶಿಸಿದ ತಕ್ಷಣ ತಮ್ಮ ಸಾಧನಗಳನ್ನು ಆಫ್ ಮಾಡಿ ಸುರಕ್ಷಿತವಾಗಿ ಇಡಬೇಕು
* ಪರಿಚಾರಕರು ಮತ್ತು ಅಡುಗೆ ಕೆಲಸಗಾರರಂತಹ ಸಿಬ್ಬಂದಿಗಳು ಸಂವಹನ ಸಾಧನಗಳನ್ನು ತರಲು ಸಹ ಅನುಮತಿಸಲಾಗುವುದಿಲ್ಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net