ಇದೇ ನಿಮ್ಮ ಕೊನೆ ವಿಶ್ವಕಪ್​? ನಿವೃತ್ತಿ ಪ್ರಶ್ನೆಗೆ ಹರ್ಮನ್​ಪ್ರೀತ್ ಗರಂ; ಏಕೆ ಈ ಪ್ರಶ್ನೆ ಕೇಳಿದ್ದು ಎಂದು ಹರಿಹಾಯ್ದ ಟೀ ಇಂಡಿಯಾ ನಾಯಕಿ! Harmanpreet Kaur

ಪ್ರೆಸ್ ಮೀಟ್‌ನಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗರಂ
ಪ್ರೆಸ್ ಮೀಟ್‌ನಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗರಂ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೆಸ್ ಮೀಟ್‌ನಲ್ಲಿ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗರಂ
  • ಮಹಿಳಾ ಟಿ-20 ವಿಶ್ವಕಪ್‌ಗೂ ಮುನ್ನ ನಡೆದ ಪ್ರೆಸ್ ಮೀಟ್‌
  • ಇದೇ ನಿಮ್ಮ ಕೊನೆ ವಿಶ್ವಕಪ್? ಯಾವಾಗ ನಿವೃತ್ತಿ ಎಂಬ ಪ್ರಶ್ನೆ
  • ವರದಿಗಾರ್ತಿಗೆ ಕ್ಯಾಪ್ಟನ್ ಖಡಕ್ ತಿರುಗೇಟು
ಕ್ರಿಕೆಟ್​​: ಇನ್ನೇನು ಕೆಲ ದಿನಗಳ ನಂತರ ಮಹಿಳಾ ಟಿ-20 ವಿಶ್ವಕಪ್​ ಪಂದ್ಯಾವಳಿ ಆರಂಭವಾಗಲಿದ್ದು, ಟೂರ್ನಿ ಮುನ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಭಾರತ ತಂಡದ ನಾಯಕಿ ಹರ್ಮನ್​​ಪ್ರೀತ್​ ಕೌರ್​ (Harmanpreet Kaur) ವರದಿಗಾರರಿಗೆ ನೀಡಿರುವ ರಿಯಾಕ್ಷನ್​ ಈಗ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ.

ಪಂದ್ಯಾವಳಿ ಪೂರ್ವ ನಡೆದ ಸುದ್ದಿಗೋಷ್ಟಿ!

ಜೂನ್​ 12 ರಿಂದ ಜಲೈ 5 ರ ವರೆಗೆ ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ನಡೆಯಲಿರುವ ಮಹಿಳಾ ಟಿ-20 ಪಂದ್ಯಾವಳಿ ಪೂರ್ವದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸ್ಥಳೀಯ ವರದಿಗಾರರೊಬ್ಬರು ಕೇಳಿದ ಪ್ರಶ್ನೆ ಭಾರತ ಮಹಿಳಾ ತಂಡದ ನಾಯಕಿಯ ಕೋಪಕ್ಕೆ ಕಾರಣವಾಗಿದೆ. ಆದರೆ ಎಲ್ಲಿಯೂ ತನ್ನ ಸಿಟ್ಟನ್ನು ಪ್ರದರ್ಶಿಸದ ಕೌರ್​, ಖಾರವಾಗಿ ಉತ್ತರವನ್ನು ನೀಡಿದ್ದಾರೆ.

ಇದೇ ನಿಮ್ಮ ಕೊನೆ ವಿಶ್ವಕಪ್​?

ಎಲ್ಲಾ ತಂಡಗಳ ಜಂಟಿ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಮಾಧ್ಯಮದವರು ತಾವು ಕೇಳ ಬಯಸಿದ ಪ್ರಶ್ನೆಗಳನ್ನು ತಮಗೆ ಬೇಕಾದ ನಾಯಕಿಯರಿಗೆ ಕೇಳುತ್ತಿದ್ದರು.
ಈ ಸಂದರ್ಭದಲ್ಲಿ ವರದಿಗಾರ್ತಿಯೊಬ್ಬಳು ಹರ್ಮನ್​ಪ್ರೀತ್​ಗೆ, ಇದು ನಿಮ್ಮ ಕೊನೆ ವಿಶ್ವಕಪ್​ ಆಗುತ್ತಾ? ನೀವು ಕ್ರಿಕೆಟ್​ನಿಂದ ನಿವೃತ್ತರಾಗುತ್ತಿರಾ? ಎಂದು ಕೇಳಿದ್ದಾರೆ. ಆದರೆ ಪ್ರಶ್ನೆ ಪೂರ್ವ ನಿರ್ಧಾರಿತವಾಗಿರಿಲಿಲ್ಲ ಎಂದು ತಿಳಿದ ವರದಿಗಾರ್ತಿ, ತನ್ನ ಮಾತನ್ನು ಸರಿ ಪಡಿಸಿಕೊಳ್ಳುತ್ತಾ, ನನಗೆ ಇದು ನಿಮ್ಮ ಕೊನೆಯ ವಿಶ್ವಕಪ್​ ಎಂದು ಕೇಳಬೇಕೆಂದು ಈ ಪ್ರಶ್ನೆ ಕೇಳಿದೆ ಎಂದು ಸಮಜಾಯಿಷಿ ಕೊಟ್ಟಿದ್ದಾಳೆ.

ಕ್ಯಾಪ್ಟನ್​ನಿಂದ ಖಡಕ್​ ಆನ್ಸರ್​!

ಈ ಪ್ರಶ್ನೆ ಹಾಗೂ ಸಮಜಾಯಿಷಿ ಎರಡನ್ನು ತಾಳ್ಮೆಯಿಂದ ಕೇಳಿಸಿಕೊಂಡ ಹರ್ಮನ್​​ಪ್ರೀತ್​ ಕೌರ್​, ಹಾಗಾದರೆ ಈ ಪ್ರಶ್ನೆಯನ್ನು ಏಕೆ ಕೇಳಿದ್ದು? ಎಂದು ಖಡಕ್​ ಆಗಿ ಉತ್ತರಿಸಿ, ವ್ಯಂಗ್ಯವಾಗಿ ಮುಗ್ಳುನಕ್ಕಿದ್ದಾರೆ. ಪಂದ್ಯಾವಳಿ ಜೂನ್​ 12 ರಿಂದ ಆರಂಭವಾಗುತ್ತಿದೆ ಆದರೂ ಭಾರತ ಭಾನುವಾರ (ಜೂನ್​ 14) ಎಡ್ಜ್‌ಬಾಸ್ಟನ್ ಮೈದಾನದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net