ಕಳೆದ ಐಪಿಎಲ್ನಲ್ಲಿ ಅಂದರೆ, 18ನೇ ಆವೃತ್ತಿಯಲ್ಲಿ ಪಾದರ್ಪಣೆ ಮಾಡಿ, ಚೊಚ್ಚಲ ಟೂರ್ನಮೆಂಟ್ನಲ್ಲೇ ಬ್ಯಾಟಿಂಗ್ ಸುನಾಮಿ ಸೃಷ್ಟಿಸಿ ಎಲ್ಲರ ಗಮನ ಸೆಳೆದ ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ, ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯಲ್ಲೂ ತನ್ನ ಬಿರುಗಾಳಿ ಬ್ಯಾಟಿಂಗ್ ಅನ್ನು ಮುಂದುವರಿಸಿದ್ದಾರೆ. ಈ ಸೀಸನ್ನಲ್ಲಿ ರಾಜಸ್ಥಾನ ತಂಡ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಮೂರರಲ್ಲೂ ಗೆಲುವು ಸಾಧಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ಮೂರೂ ಪಂದ್ಯದಲ್ಲೂ ವೈಭವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.